ಸಾರಾಂಶ
ಹೊಸಬರ ಪ್ರಾಪ್ತಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ಸಿನಿವಾರ್ತೆ
‘ಪ್ರಾಪ್ತಿ’ ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದ ನಿರ್ದೇಶನದ ಜತೆಗೆ ನಿರ್ಮಾಣ ಹೊಣೆ ಹೊತ್ತಿರುವುದು ಡಾ ಎಸ್ ಮಹೇಶ್ ಬಾಬು. ಸಿರಿ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಹಾಡು ಮತ್ತು ಟ್ರೇಲರ್ ನೋಡಬಹುದು. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಚಿತ್ರಕ್ಕೆ ಶುಭ ಕೋರಿದರು.
ಡಾ ಎಸ್ ಮಹೇಶ್ ಬಾಬು, ‘ವೈವಾಹಿಕ ಸಂಬಂಧಗಳು, ಆಕರ್ಷಣೆ ಮತ್ತು ಸಂಸ್ಕೃತಿ ಈ ಮೂರು ವಿಷಯಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನಲ್ಲಿ ಈ ವಿಷಯಗಳು ಕತೆಯಲ್ಲಿ ಬರುತ್ತವೆ’ ಎಂದರು.
ಜಯಸೂರ್ಯ ನಾಯಕ. ಗಾಯಕಿ ಮಂಜುಳಾ ಗುರುರಾಜ್ ಅವರ ಸೊಸೆ ಗೌರಿಸಾಗರ್, ನಿಖಿತಾ ರಾಮ್, ಮೋನಿಷಾ ತಾಮಸ್, ಕಳಸ ಮಂಜುನಾಥ್, ಮಂಜುಳಾ ರೆಡ್ಡಿ ನಟಿಸಿದ್ದಾರೆ.