ಸಿನಿವಾರ್ತೆ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್‌ ಯಶ್‌ ಅವರ ‘ಟಾಕ್ಸಿಕ್‌’ ಟ್ರೇಲರ್‌ ವಿರುದ್ಧ ವಾಚಾಮಗೋಚರವಾಗಿ ಮಾತು ಹರಿಯಬಿಟ್ಟಿದ್ದಾರೆ. ಇದು ಯಶ್‌ ಫ್ಯಾನ್ಸ್‌ ಕೆಂಗಣ್ಣಿಗೆ ಗುರಿಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ರಿಷಿಕಾ, ‘ಹೆಣ್ಮಕ್ಳಿಗೆ ಅಂದ ಇದ್ರೆ ಚಂದ, ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ, ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ. ಮನೆಯಲ್ಲಿ ಹೆಂಡ್ತಿ ಇದಾಳೆ, ಇದೇನು ಹೀರೋಯಿನ್​​​ಗಳ ಜೊತೆ ನಿನ್ನ ಚಕ್ಕಂದ ಕಂದ. ನಿಂಗೂ ಹೆಣ್ ಮಗ್ಳು ಇದಾಳೆ ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ.. ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ. ಐ ಆಮ್ ಟಾಕ್ಸಿಕ್’ಎಂದು ವಿಚಿತ್ರ ರೀತಿಯಲ್ಲಿ ಮಾತನಾಡಿದ್ದಾರೆ.