ಲೋಹಿತ್‌ ನಿರ್ದೇಶನದ ಪ್ರಜ್ವಲ್ ದೇವರಾಜ್ ನಟನೆಯ ರಾಕ್ಷಸ ಚಿತ್ರದ ಟ್ರೈಲರ್ ಬಿಡುಗಡೆ

| Published : Aug 15 2024, 01:54 AM IST / Updated: Aug 15 2024, 03:55 AM IST

ಲೋಹಿತ್‌ ನಿರ್ದೇಶನದ ಪ್ರಜ್ವಲ್ ದೇವರಾಜ್ ನಟನೆಯ ರಾಕ್ಷಸ ಚಿತ್ರದ ಟ್ರೈಲರ್ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್ ದೇವರಾಜ್ ನಟನೆಯ ರಾಕ್ಷಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

 ಸಿನಿವಾರ್ತೆ

ಪ್ರಜ್ವಲ್‌ ದೇವರಾಜ್‌ ನಟನೆಯ ‘ರಾಕ್ಷಸ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಲೋಹಿತ್‌ ನಿರ್ದೇಶನದ ಈ ಚಿತ್ರದಲ್ಲಿ ಅರುಣ್‌ ರಾಥೋಡ್‌, ಶ್ರೀಧರ್‌, ಗೌತಮ್‌, ಸೋಮಶೇಖರ್‌, ವಿಹಾನ್‌ ಕೃಷ್ಣ ಜಯಂತ್‌ ನಟಿಸಿದ್ದಾರೆ. ದೀಪು ಬಿ ಎಸ್‌, ನವೀನ್‌ ಗೌಡ ಹಾಗೂ ಮಾನಸ ಚಿತ್ರದ ನಿರ್ಮಾಪಕರು.

ಪ್ರಜ್ವಲ್‌ ದೇವರಾಜ್‌, ‘ಮೊದಲ ಬಾರಿಗೆ ಹಾರರ್‌ ಜಾನರ್‌ ಚಿತ್ರದಲ್ಲಿ ನಟಿಸಿದ್ದೇನೆ. ಹಾರರ್ ಸಿನಿಮಾ ಎಂದರೆ ನನಗೆ ತುಂಬಾ ಭಯ. ನಾನು ಹೆಂಡತಿ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡು ಹಾರರ್ ಸಿನಿಮಾ ನೋಡ್ತೀನಿ. ಆದರೆ ಈಗ ನಾನೇ ಹಾರರ್ ಸಿನಿಮಾದಲ್ಲೇ ನಟಿಸಿದ್ದೇನೆ ಇದಕ್ಕೆ ಕಾರಣ ಲೋಹಿತ್. ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ’ ಎಂದರು.

ಲೋಹಿತ್‌, ‘ಮಮ್ಮಿ, ದೇವಕಿ ಚಿತ್ರಗಳು ಕೊಟ್ಟ ಗೆಲವು ಮತ್ತೊಂದು ಹಾರರ್‌ ಚಿತ್ರ ಮಾಡುವುದಕ್ಕೆ ಕಾರಣವಾಯಿತು. ಇದು ನನ್ನ ಪಾಲಿಗೆ ಇದು ವಿಶೇಷ ಸಿನಿಮಾ. ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡುವ ಮತ್ತು ವಿಷುವಲ್‌ ಎಫೆಕ್ಟ್‌ ಕೊಡುವ ಸಿನಿಮಾ ಇದು’ ಎಂದರು.

ನಟಿ ಪ್ರಿಯಾಂಕ ಉಪೇಂದ್ರ, ನಿರ್ಮಾಪಕ ಆರ್‌ ಎಸ್‌ ಗೌಡ, ಸಂಭಾಷಣೆಕಾರ ಮಾಸ್ತಿ, ಸಿದ್ಲಿಂಗು ಶ್ರೀಧರ್‌ ಚಿತ್ರಕ್ಕೆ ಶುಭ ಕೋರಿದರು.