‘ರಣಾಕ್ಷ’ ಚಿತ್ರದ ಟ್ರೇಲರ್‌ ಬಿಡುಗಡೆ : ಸೀರುಂಡೆ ರಘು ನಾಯಕನಾಗಿ ನಟಿಸಿದ ದೇವರು, ದೆವ್ವ ಜಿಜ್ಞಾಸೆಯ ಕತೆ

| Published : Sep 19 2024, 01:46 AM IST / Updated: Sep 19 2024, 05:27 AM IST

Film Theater

ಸಾರಾಂಶ

‘ರಣಾಕ್ಷ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ನಟಿಸಿದ್ದು, ಕೆ ರಾಘವ ನಿರ್ದೇಶಿಸಿದ್ದಾರೆ. ರಾಮು ನಿರ್ಮಿಸಿದ್ದಾರೆ. ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ.

 ಸಿನಿವಾರ್ತೆ

ದೇವರು ಹಾಗೂ ದೆವ್ವದ ನಡುವಿನ ಸಂಘರ್ಷದ ಕತೆಯನ್ನು ಹೇಳುವ ‘ರಣಾಕ್ಷ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ನಟಿಸಿದ್ದು, ಕೆ ರಾಘವ ನಿರ್ದೇಶಿಸಿದ್ದಾರೆ. ರಾಮು ನಿರ್ಮಿಸಿದ್ದಾರೆ. ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ.

ರಾಘವ, ‘ಕಲಾವಿದನಾಗಿ ಬಂದವನು ನಿರ್ದೇಶಕನಾಗಿದ್ದೇನೆ. ‘ರಣಾಕ್ಷ’ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಫ್ಯಾಮಿಲಿ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ’ ಎಂದರು.

ರಾಮು, ‘ಹಳ್ಳಿ ಸೊಗಡಿನ ಕೌಟುಂಬಿಕ ಕತೆ ಇರೋ ಚಿತ್ರ. ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆಯಿಂದ ಚಿತ್ರರಂಗಕ್ಕೆ ಬಂದಿದ್ದೇನೆ’ ಎಂದರು. ಸೀರುಂಡೆ ರಘು, ‘20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು. ವಿಶಾಲ್‌ ಆಲಾಪ್‌ ಸಂಗೀತವಿದೆ.