ರ್‍ಯಾಪ್‌ ಸ್ಕರ್ಟಲ್ಲಿ ಆಲಿಯಾ, ಕರೀನಾ, ಜಾನ್ವಿ, ಅನನ್ಯಾ

| Published : Jun 29 2024, 12:38 AM IST

ಸಾರಾಂಶ

ಬಾಲಿವುಡ್‌ನಲ್ಲಿ ರ್‍ಯಾಪ್‌ ಸ್ಕರ್ಟ್‌ ಟ್ರೆಂಡ್‌

ಕನ್ನಡಪ್ರಭ ಸಿನಿವಾರ್ತೆ

ಬೆಂಗಳೂರಿನಂತೆ ಬಾಂಬೆಯಲ್ಲಿ ಅತ್ತ ಚಳಿಯೂ ಅಲ್ಲ, ಇತ್ತ ಸೆಕೆಯೂ ಅಲ್ಲದ ಹಿತವಾದ ವಾತಾವರಣ. ಆದರೆ ಇಲ್ಲಿ ಏಕ್‌ದಂ ತಾಪಮಾನ ಏರಲು ಕಾರಣ ಆಗಿರೋದು ಬಾಲಿವುಡ್‌ ಹುಡುಗಿಯರ ನೆರಿಗೆ ಲಂಗ.

ನಮ್ಮೂರಿನ ಹುಡುಗೀರು ಉದ್ದ ಲಂಗದ ನೆರಿಗೆ ಚಿಮ್ಮಿಸುತ್ತ ಪಡ್ಡೆಗಳ ಎದೆ ಬಡಿತ ಹೆಚ್ಚಿಸಿದರೆ ಈ ಬಾಲಿವುಡ್‌ ಹುಡುಗೀರು ನೆರಿಗೆಯನ್ನೇ ಮೇಲಕ್ಕಿಡಿಸಿ ಜೀವದ ತಾಪಮಾನ ಏರಿಸುತ್ತಿದ್ದಾರೆ. ಸದ್ಯ ಬಾಲಿವುಡ್‌ ಹುಡುಗೀರ ಫೇವರಿಟ್‌ ಈ ರ್‍ಯಾಪ್‌ ಸ್ಕರ್ಟ್.

‘ಈ ರ್‍ಯಾಪ್‌ ಸ್ಕರ್ಟ್‌ಗಳು ತೊಡಲು ಬಹಳ ಕಂಫರ್ಟೇಬಲ್‌. ಇದರ ಮೇಲೆ ನೀವು ಕ್ರಾಪ್‌ ಟಾಪ್‌, ಟೀ ಶರ್ಟ್‌, ಜಾಕೆಟ್‌, ಇದ್ಯಾವುದೂ ಸಿಗಲಿಲ್ಲ ಅಂದರೆ ಸ್ವೆಟರ್‌ ಅನ್ನೂ ಸಿಕ್ಕಿಸಿಕೊಂಡು ಮನೆಯಿಂದ ಹೊರಬೀಳಬಹುದು. ನಿಮ್ಮ ಸ್ಟೈಲಿಶ್‌ ಲುಕ್‌ಗೆ ಆಚೆ ಮನೆ ಅಂಕಲ್‌ ಕನ್ನಡಕ ಇಳಿಸಿ ವಾರೆ ಕಣ್ಣಲ್ಲಿ ನೋಡಿದ್ರೆ ನನ್ನ ಬೈಬೇಡಿ’ ಅಂತ ಡಿಸೈನರ್‌ ಸಭ್ಯಸಾಚಿ ಹೇಳಿದ್ದಾರೆ.

ಶಾರ್ಟ್‌, ಲಾಂಗ್‌, ಸೈಡ್‌ ಕಟ್‌ ಇರುವ ಡಿಸೈನ್‌ ಹೀಗೆ ಥರಾವರಿ ರ್‍ಯಾಪ್‌ ಸ್ಕರ್ಟ್‌ ವಿನ್ಯಾಸಗಳು ಸದ್ಯ ಟ್ರೆಂಡಿಂಗ್‌ನಲ್ಲಿವೆ. ಬಾಲಿವುಡ್‌ನಲ್ಲಿ ಜಾನ್ವಿ ಕಪೂರ್‌, ಕರೀನಾ, ಆಲಿಯಾ ಭಟ್‌ರಿಂದ ಹಿಡಿದು ಅನನ್ಯಾ ಪಾಂಡೆ ತನಕ ಎಲ್ಲರೂ ಇದರ ಸ್ಟೈಲ್‌ಗೆ ಫಿದಾ ಆಗಿದ್ದಾರೆ.