ಸಲ್ಮಾನ್ ಖಾನ್ ನಟನೆಯ ‘ಸಿಕಂದರ್‌’ ಸಿನಿಮಾದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈಗಾಗಲೇ ಬಾಲಿವುಡ್‌ನ ‘ಅನಿಮಲ್‌’ ಸಿನಿಮಾ ಮೂಲಕ ಯಶಸ್ಸಿನ ಮೆಟ್ಟಿಲೇರುತ್ತಿರುವ ಈ ಕಿರಿಕ್‌ ಬೆಡಗಿಗೆ ಇದೀಗ ಸಲ್ಮಾನ್‌ ಖಾನ್‌ ಜೊತೆ ನಟಿಸುವ ಅವಕಾಶ ಸಿಕ್ಕಿದೆ.

ರಶ್ಮಿಕಾ ಮಂದಣ್ಣ, ‘ನೀವೆಲ್ಲ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ಸ್‌ ಕೇಳುತ್ತಿದ್ದಿರಿ. ಆ ಸ್ವೀಟ್‌ ಸರ್ಪ್ರೈಸ್‌ ಇಲ್ಲಿದೆ. ಸಿಕಂದರ್‌ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಹೆಮ್ಮೆ ಇದೆ’ ಎಂದಿದ್ದಾರೆ. ‘ಘಜನಿ’ ಖ್ಯಾತಿಯ ನಿರ್ದೇಶಕ ಎಆರ್‌ ಮುರುಗದಾಸ್‌ ನಿರ್ದೇಶನದ ಈ ಚಿತ್ರ 2025ರ ಈದ್‌ ಹಬ್ಬದಂದು ಬಿಡುಗಡೆಯಾಗಲಿದೆ.