ನಟಿ ಶ್ರುತಿ ಹರಿಹರನ್ ಅಭಿನಯದ ಸಾರಾಂಶ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ನಿರ್ದೇಶಕ ಹೇಮಂತ್ ರಾವ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಕನ್ನಡಪ್ರಭ ಸಿನಿವಾರ್ತೆ

ಶ್ರುತಿ ಹರಿಹರನ್‌ ನಟನೆಯ, ಸೂರ್ಯ ವಸಿಷ್ಠ ನಿರ್ದೇಶನದ ‘ಸಾರಾಂಶ’ ಚಿತ್ರದ ಟ್ರೇಲರ್‌ ಅನ್ನು ನಿರ್ದೇಶಕ ಹೇಮಂತ್‌ ರಾವ್‌ ಇತ್ತೀಚೆಗೆ ಬಿಡುಗಡೆ ಮಾಡಿದರು. ಫೆ.15ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

ನಿರ್ದೇಶನದ ಜತೆಗೆ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸೂರ್ಯ ವಸಿಷ್ಠ ಮಾತನಾಡಿ, ‘ಈ ಕಾಲದ ಕತೆ ಇದು. ಕನ್ನಡಕ್ಕೆ ಹೊಸ ರೀತಿಯ ಕತೆಯನ್ನು ಹೇಳುವ ಸಿನಿಮಾ. ಎಲ್ಲರೂ ನೋಡಿ, ಬೆಂಬಲಿಸಿ’ ಎಂದು ಮನವಿ ಮಾಡಿಕೊಂಡರು.

ಶ್ರುತಿ ಹರಿಹರನ್‌, ‘ನಾನು ಈ ಚಿತ್ರದಲ್ಲಿ ಮಾಯಾ ಹೆಸರಿನ ಪಾತ್ರ ಮಾಡಿದ್ದೇನೆ. ಟ್ರೇಲರ್‌ ಮೂಲಕ ಚಿತ್ರದ ಮಹತ್ವ ಹೇಳಲಾಗಿದೆ. ಒಳ್ಳೆಯ ಕತೆಗಳು ಪ್ರೇಕ್ಷಕರಿಗೆ ತಲುಪಬೇಕು. ಇಂಥ ಸಿನಿಮಾಗಳಿಗೆ ನೋಡುಗರ ಬೆಂಬಲ ಇರಲಿ’ ಎಂದರು. ದೀಪಕ್‌ ಸುಬ್ರಮಣ್ಯ, ಆಸಿಫ್ ಕ್ಷತ್ರಿಯಾ, ರವಿ ಭಟ್‌, ರಾಮ್‌ ಮಂಜುನಾಥ್‌, ಸತೀಶ್ ಕುಮಾರ್‌, ಪೃಥ್ವಿ ಬನವಾಸಿ ನಟಿಸಿರುವ ಈ ಚಿತ್ರವನ್ನು ರವಿ ಕಶ್ಯಪ್ ಮತ್ತು ಆರ್‌ ಕೆ ನಲ್ಲಮ್‌ ನಿರ್ಮಿಸಿದ್ದಾರೆ.