ಸಾರಾಂಶ
ತಾರಕೇಶ್ವರ ಸಿನಿಮಾದ ಟ್ರೇಲರ್ ಬಿಡುಗಡೆ
ಕನ್ನಡಪ್ರಭ ಸಿನಿವಾರ್ತೆ‘ಈ ಅಲ್ಟ್ರಾ ಮಾಡರ್ನ್ ಯುಗದಲ್ಲಿ ಪೌರಾಣಿಕ ಚಿತ್ರ ಮಾಡುವುದು ನಿಜಕ್ಕೂ ಚಾಲೆಂಜಿಂಗ್. ಈ ಕಾಲದ ಜನರಿಗೆ ಮನಸ್ಸಿಗೆ ನಾಟುವಂತೆ ಕಥೆ ಹೇಳುವುದು ಚಾಲೆಂಜ್, ಸಿನಿಮಾ ಶೂಟಿಂಗ್ ಅದಕ್ಕಿಂತ ದೊಡ್ಡ ಸವಾಲು’ ಎಂದು ಹಿರಿಯ ನಟ ಗಣೇಶ್ ರಾವ್ ಕೇಸರ್‌ಕರ್ ಹೇಳಿದ್ದಾರೆ.ಇವರು ನಿರ್ಮಿಸಿ, ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ತಾರಕೇಶ್ವರ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಿನಿಮಾವನ್ನು ಪುರುಷೋತ್ತಮ್ ಓಂಕಾರ್ ನಿರ್ದೇಶಿಸಿದ್ದಾರೆ.‘ನಮ್ಮ ಸಿನಿಮಾದ ಟಿಕೆಟ್ ದರ 100 ರೂಪಾಯಿ ಇರುತ್ತದೆ. ಇದನ್ನು ಖರೀದಿಸಿದವರು ಕರ್ನಾಟಕದ ಯಾವುದೇ ಜಿಲ್ಲೆ, ತಾಲ್ಲೂಕು ಕೇಂದ್ರದಲ್ಲಿ ಸಿನಿಮಾ ವೀಕ್ಷಿಸಬಹುದು’ ಎಂದೂ ಗಣೇಶ್ ರಾವ್ ತಿಳಿಸಿದರು. ಮಂಜುನಾಥ ಭಾರತಿ ಸ್ವಾಮೀಜಿ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಟ್ರೇಲರ್ ರಿಲೀಸ್ ಮಾಡಿದರು. ಈ ವೇಳೆ ಅಂಚೆ ಇಲಾಖೆ ಹೊರತಂದಿರುವ ‘ತಾರಕೇಶ್ವರ’ ಚಿತ್ರದ ಅಂಚೆಚೀಟಿ ಬಿಡುಗಡೆ ಮಾಡಲಾಯಿತು.
ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ಸಿಕ್ಕಿದೆ. ರೂಪಾಲಿ, ಬಾಲನಟಿ ಋತುಸ್ಪರ್ಶ, ಸುಮಿತ ಪ್ರವೀಣ್, ಅನ್ನಪೂರ್ಣ, ವಿಕ್ರಂ ಸೂರಿ, ನಮಿತಾರಾವ್ ನಟಿಸಿದ್ದಾರೆ.