ಸಿನಿವಾರ್ತೆ
ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ‘ತಬಾಹಿ’ ವೀಡಿಯೋ ಹಾಡು ಬಿಡುಗಡೆ ಆಗಿದೆ. ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಈ ಹಾಡು ವೈರಲ್ ಆಗಿದೆ. ಕಾರಣ ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಯಶ್ ಹಾಗೂ ಕಿಯಾರಾ ನಡುವಿನ ಬೋಲ್ಡ್ ದೃಶ್ಯಗಳು.
ಹಾಡಿನುದ್ದಕ್ಕೂ ಬೀಚು, ಕಾರು, ಪಬ್ಬು
ಹಾಡಿನುದ್ದಕ್ಕೂ ಬೀಚು, ಕಾರು, ಪಬ್ಬು, ಸರ್ಕಸ್ ಹೀಗೆ ಎಲ್ಲೆಲ್ಲೂ ರಾಯ ಮತ್ತು ನಾಡಿಯಾ ಜೋಡಿಯ ರೊಮ್ಯಾಂಟಿಕ್ ಸೀನ್‌ಗಳೇ ಇವೆ. ಸಿನಿಮಾದಲ್ಲಿ ಈ ಜೋಡಿಯ ಅಪೀಯರೆನ್ಸ್, ಕೆಮೆಸ್ಟ್ರಿ ಹೇಗಿರಬಹುದು ಎಂಬುದು ಈ ಹಾಡಿನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಪೋರ್ಚುಗೀಸರ ಕಾಲದ ಗೋವನ್ ಪರಿಸರ
ಪೋರ್ಚುಗೀಸರ ಕಾಲದ ಗೋವನ್ ಪರಿಸರದಲ್ಲಿ ತೆರೆದುಕೊಳ್ಳುವ ಈ ಹಾಡಿನಲ್ಲಿ ಯಶ್ ದೇಹದಾರ್ಢ್ಯ ಹಾಗೂ ಕಿಯಾರಾ ಗ್ಲಾಮರ್ ಹೈಲೈಟ್ ಆಗಿದೆ. ವಿಶೇಷ ಅಂದರೆ ಹಾಡಿನ ಮಧ್ಯೆ ನಯನತಾರಾ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ ಈ ಹಾಡಿನಲ್ಲಿ ಬಾಲಿವುಡ್ ನಟಿ ತಾರ ಸುತಾರಿಯಾ ಮತ್ತು ಯಶ್ ನಡುವೆ ಡೈಲಾಗ್ ಸಹ ಮೂಡಿಬಂದಿದ್ದು, ಇದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆ.26ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
