ರಕ್ಷಿತ್‌ ತೀರ್ಥಹಳ್ಳಿ ನಿರ್ದೇಶನದ‘ತಿಮ್ಮನ ಮೊಟ್ಟೆಗಳು’ ಚಿತ್ರದ ಟ್ರೇಲರನ್ನು ನಿರ್ದೇಶಕ ಪಿ ಶೇಷಾದ್ರಿ, ಕೋಡ್ಲು ರಾಮಕೃಷ್ಣ ಬಿಡುಗಡೆ ಮಾಡಿದ್ದಾರೆ.

 ಸಿನಿವಾರ್ತೆ

ರಕ್ಷಿತ್‌ ತೀರ್ಥಹಳ್ಳಿ ನಿರ್ದೇಶನದ‘ತಿಮ್ಮನ ಮೊಟ್ಟೆಗಳು’ ಚಿತ್ರದ ಟ್ರೇಲರನ್ನು ನಿರ್ದೇಶಕ ಪಿ ಶೇಷಾದ್ರಿ, ಕೋಡ್ಲು ರಾಮಕೃಷ್ಣ ಬಿಡುಗಡೆ ಮಾಡಿದ್ದಾರೆ.

ಈ ಸಿನಿಮಾ ಕುರಿತು ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ, ‘ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾಳಿಂಗ ಸರ್ಪದ ಕುರಿತ ಕತೆ ಈ ಚಿತ್ರದಲ್ಲಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಈ ಚಿತ್ರದ ಪ್ರಿಮೀಯರ್ ಶೋ ನಡೆದಿದೆ. ಅಲ್ಲಿನ ಜನರು ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ’ ಎಂದರು.

ಪಿ.ಶೇಷಾದ್ರಿ, ‘ನಾನು ಈ ಚಿತ್ರವನ್ನು ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ್ದೇನೆ. ಈಗಿನ ಪರಿಸ್ಥಿತಿಗೆ ತಕ್ಕಂತ ಕತೆ ಚಿತ್ರದಲ್ಲಿದೆ. ಇಂಥ ಚಿತ್ರಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಬರಬೇಕು’ ಎಂದರು.

ಆದರ್ಶ್ ಅಯ್ಯಂಗಾರ್‌ ಈ ಸಿನಿಮಾ ನಿರ್ಮಿಸಿದ್ದಾರೆ. ಜೂನ್‌ 27ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಹಿರಿಯ ನಟ ಸುಚೇಂದ್ರ ಪ್ರಸಾದ್‌, ತಿಮ್ಮನ ಪಾತ್ರಧಾರಿ ಕೇಶವ್‌ ಗುತ್ತಳಿಕೆ, ಆಶಿಕಾ ಸೋಮಶೇಖರ್‌, ಪ್ರಗತಿ ಪ್ರಭು, ರಘು ರಾಮನಕೊಪ್ಪ ಹಾಗೂ ಸಂಗೀತ ನಿರ್ದೇಶಕ ಹೇಮಂತ್‌ ಜೋಯಿಷ್‌ ಹಾಜರಿದ್ದರು.