ಸಾರಾಂಶ
, ‘ಅನಿಮಲ್’ ಖ್ಯಾತಿಯ ಸುದೀಪ್ ರೆಡ್ಡಿ ವಂಗ ನಿರ್ದೇಶನದ ‘ಸ್ಪಿರಿಟ್’ ಸಿನಿಮಾಕ್ಕೆ ಕೊನೆಗೂ ನಾಯಕಿಯ ಆಯ್ಕೆ ಆಗಿದೆ. ‘ಅನಿಮಲ್’ ಸಿನಿಮಾದಲ್ಲಿ ವೈಬ್ರೆಂಟ್ ಆಕ್ಟಿಂಗ್ ಮೂಲಕ ಗಮನಸೆಳೆದ ತೃಪ್ತಿ ದಿಮ್ರಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಸಿನಿವಾರ್ತೆ
ಪ್ರಭಾಸ್ ನಟನೆ, ‘ಅನಿಮಲ್’ ಖ್ಯಾತಿಯ ಸುದೀಪ್ ರೆಡ್ಡಿ ವಂಗ ನಿರ್ದೇಶನದ ‘ಸ್ಪಿರಿಟ್’ ಸಿನಿಮಾಕ್ಕೆ ಕೊನೆಗೂ ನಾಯಕಿಯ ಆಯ್ಕೆ ಆಗಿದೆ. ‘ಅನಿಮಲ್’ ಸಿನಿಮಾದಲ್ಲಿ ವೈಬ್ರೆಂಟ್ ಆಕ್ಟಿಂಗ್ ಮೂಲಕ ಗಮನಸೆಳೆದ ತೃಪ್ತಿ ದಿಮ್ರಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಹಿಂದೆ ಈ ಪಾತ್ರವನ್ನು ದೀಪಿಕಾ ಪಡುಕೋಣೆಗೆ ನೀಡಲಾಗಿತ್ತು. ಆದರೆ ಅವರು ಕಿರಿಕ್ ಮಾಡಿಕೊಂಡು ಆಚೆ ನಡೆದ ಮೇಲೆ ಈ ಪಾತ್ರಕ್ಕಾಗಿ ನಾಯಕಿಯರ ಶೋಧ ನಡೆದಿತ್ತು. ಕನ್ನಡದ ಹುಡುಗಿ ರುಕ್ಮಿಣಿ ವಸಂತ್್ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ ತಮ್ಮ ಈ ಹಿಂದಿನ ಸಿನಿಮಾದಲ್ಲಿ ನಟಿಸಿದ್ದ ಕಲಾವಿದೆಯನ್ನೇ ಚಿತ್ರತಂಡ ನಾಯಕಿ ಪಾತ್ರಕ್ಕೆ ಆರಿಸಿಕೊಂಡಿದೆ. ನಿರ್ದೇಶಕ ಸುದೀಪ್ ವಂಗಾ ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಸುಮಾರು 400 ಕೋಟಿ ರು. ವೆಚ್ಚದಲ್ಲಿ ‘ಸ್ಪಿರಿಟ್’ ಸಿನಿಮಾ ನಿರ್ಮಾಣವಾಗಲಿದ್ದು ಸೆಪ್ಟೆಂಬರ್‌ನಿಂದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.