ದೇವರಾಜ್ ಪುತ್ರ ಪ್ರಣಾಮ್‌ ದೇವರಾಜ್‌ ನಟನೆಯ ಸನ್ ಆಫ್‌ ಮುತ್ತಣ್ಣ ಸದ್ಯದಲ್ಲೇ ತೆರೆಗೆ ಬರಲಿದ್ದು, ಇತ್ತೀಚೆಗೆ ಮೈಸೂರಿನಲ್ಲಿ ಅದ್ದೂರಿಯಾಗಿ ಹಾಡುಗಳನ್ನು ಬಿಡುಗಡೆ ಮಾಡಿಕೊಂಡಿದೆ.

 ಸಿನಿವಾರ್ತೆ

ದೇವರಾಜ್‌ ಅವರ ಪುತ್ರ ಪ್ರಣಾಮ್‌ ದೇವರಾಜ್‌ ನಟನೆಯ ‘s/o ಮುತ್ತಣ್ಣ’ ಚಿತ್ರದ ‘ಕಮಂಗಿ ನನ್‌ ಮಗನೇ’ ಎಂಬ ಹಾಡು ಬಿಡುಗಡೆಯಾಗಿದೆ. ಶ್ರೀಕಾಂತ್‌ ಹುಣಸೂರು ನಿರ್ದೇಶನದ ಈ ಚಿತ್ರಕ್ಕಾಗಿ ಯೋಗರಾಜ್‌ ಭಟ್‌ ಬರೆದಿರುವ ಹಾಡು ಇದಾಗಿದ್ದು, ಶರಣ್‌ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಡಿದ್ದಾರೆ. ಸಚಿನ್‌ ಬಸ್ರೂರು ಸಂಗೀತ ನೀಡಿದ್ದಾರೆ.

ಖುಷಿ ರವಿ ಚಿತ್ರದ ನಾಯಕಿ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ, ಸಂದೀಪ ಎಂ ತಾರಾಬಳಗದಲ್ಲಿದ್ದಾರೆ.