ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್‌’ ಸಿನಿಮಾದಿಂದ ದೀಪಿಕಾ ಪಡುಕೋಣೆ ಔಟ್‌ ಆದ ಸುದ್ದಿಯ ಬೆನ್ನಲ್ಲೇ ಅವರ ಜಾಗಕ್ಕೆ ರುಕ್ಮಿಣಿ ವಸಂತ್ ಎಂಟ್ರಿ

ಸಿನಿವಾರ್ತೆ

ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್‌’ ಸಿನಿಮಾದಿಂದ ದೀಪಿಕಾ ಪಡುಕೋಣೆ ಔಟ್‌ ಆದ ಸುದ್ದಿಯ ಬೆನ್ನಲ್ಲೇ ಅವರ ಜಾಗಕ್ಕೆ ರುಕ್ಮಿಣಿ ವಸಂತ್ ಎಂಟ್ರಿ ಕೊಡುತ್ತಿರುವುದು ಬಹುತೇಕ ಖಚಿತವಾಗಿದೆ.

ಈ ಸಿನಿಮಾದಲ್ಲಿ ನಟಿಸುವ ಸಂಬಂಧ ಸಿನಿಮಾ ತಂಡ ಈಗಾಗಲೇ ರುಕ್ಮಿಣಿ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದು, ಈ ಪ್ರಾಜೆಕ್ಟ್‌ ಬಗ್ಗೆ ಕನ್ನಡದ ಹುಡುಗಿ ರುಕ್ಮಿಣಿ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಪ್ರಭಾಸ್‌ ನಟನೆಯ ‘ಸ್ಪಿರಿಟ್’ ಸಿನಿಮಾ ಪೊಲೀಸ್‌ ಆ್ಯಕ್ಷನ್‌ ಡ್ರಾಮಾವಾಗಿದ್ದು, ಬಹು ನಿರೀಕ್ಷಿತ ಪಟ್ಟಿಯಲ್ಲಿ ಸೇರಿಕೊಂಡಿದೆ.