ಸಲಾರ್ ಯಶಸ್ಸಿನ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಪ್ರಮುಖ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ತೆಲುಗು ಚಿತ್ರನಟ ಪ್ರಭಾಸ್ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಖ್ಯಾತ ತೆಲುಗು ಚಿತ್ರನಟ ಪ್ರಭಾಸ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಸಲಾರ್ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಕಟೀಲು ದುರ್ಗೆಯ ದರ್ಶನ ಪಡೆದ ಅವರು, ವಿಶೇಷ ಪೂಜೆ ಸಲ್ಲಿಸಿ ಕಟೀಲು ದೇವರಿಗೆ ಎರಡು ಅಟ್ಟೆ ಮಲ್ಲಿಗೆ ಸಮರ್ಪಿಸಿದರು. ಪ್ರಭಾಸ್ ಅವರಿಗೆ ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣರು ಪ್ರಸಾದ, ಶೇಷ ವಸ್ತ್ರ, ದೇವರ ಪೋಟೋ ನೀಡಿ ಹರಸಿದರು. ಖ್ಯಾತ ನಿರ್ಮಾಪಕ ಹೊಂಬಾಳೆ ಫಿಲಂನ ವಿಜಯ ಕಿರಗಂದೂರು ಜೊತೆಗಿದ್ದರು.