ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿಯ ಮಗುವಿಗೆ ನಾಮಕರಣ ಕಾರ್ಯಕ್ರಮ ಸಂಭ್ರಮದಿಂದ ನಡೆದಿದೆ. ಈ ತಾರಾದಂಪತಿ ತಮ್ಮ ಮಗನಿಗೆ ‘ವಿಪ್ರ’ ಎಂಬ ಹೆಸರನ್ನಿಟ್ಟಿದ್ದಾರೆ.

ಸಿನಿವಾರ್ತೆ

ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿಯ ಮಗುವಿಗೆ ನಾಮಕರಣ ಕಾರ್ಯಕ್ರಮ ಸಂಭ್ರಮದಿಂದ ನಡೆದಿದೆ. ಈ ತಾರಾದಂಪತಿ ತಮ್ಮ ಮಗನಿಗೆ ‘ವಿಪ್ರ’ ಎಂಬ ಹೆಸರನ್ನಿಟ್ಟಿದ್ದಾರೆ.

‘ನಮ್ಮ ಬದುಕಿಗೆ ವಿಐಪಿಯಂತೆ ಮಗನ ಆಗಮನವಾಗಿದೆ. ಈ ಹಿನ್ನೆಲೆಯಲ್ಲಿ ವಿಐಪಿ ಅಕ್ಷರ ಮೊದಲಿಗೆ ಬರುವಂತೆ, ವಿಷ್ಣು ಹಾಗೂ ಶಿವನನ್ನು ಪ್ರತಿನಿಧಿಸುವ ವಿಪ್ರ ಎಂಬ ಹೆಸರನ್ನಿಟ್ಟಿದ್ದೇವೆ’ ಎಂದು ವಶಿಷ್ಠ ಸಿಂಹ ಹೇಳಿದ್ದಾರೆ.

ಇವರ ಮದುವೆ ವಾರ್ಷಿಕೋತ್ಸವದಂದೇ ಪುತ್ರನ ಜನನವಾಗಿತ್ತು.

ನಾಮಕರಣ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದರು.