ಮದುವೆ ವಾರ್ಷಿಕೋತ್ಸವದ ದಿನವೇ ಪೋಷಕರಾದ ಹರಿಪ್ರಿಯಾ - ವಶಿಷ್ಠ ಸಿಂಹ : ಸಂಭ್ರಮ ಡಬಲ್‌

| N/A | Published : Jan 27 2025, 11:52 AM IST

Haripriya Vasishta Simha

ಸಾರಾಂಶ

ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರಿಗೆ ಗಂಡು ಮಗುವಿನ ಜನನವಾಗಿದೆ. ಈ ಜೋಡಿ ಮದುವೆ ವಾರ್ಷಿಕೋತ್ಸವ ಸಂಭ್ರಮ ಒಂದುಕಡೆಯಾದರೆ, ಈಗ ಈ ಜೋಡಿ ಬದುಕಿಗೆ ಇನ್ನೊಂದು ಪುಟ್ಟ ಜೀವದ ಆಗಮನವಾಗಿದ್ದು, ಈ ಸಂಭ್ರಮ ಡಬಲ್‌ ಆಗಿದೆ.

  ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರಿಗೆ  ಗಂಡು ಮಗುವಿನ ಜನನವಾಗಿದೆ. ಈ ಜೋಡಿ ಮದುವೆ ವಾರ್ಷಿಕೋತ್ಸವ ಸಂಭ್ರಮ ಒಂದುಕಡೆಯಾದರೆ, ಈಗ ಈ ಜೋಡಿ ಬದುಕಿಗೆ ಇನ್ನೊಂದು ಪುಟ್ಟ ಜೀವದ ಆಗಮನವಾಗಿದ್ದು, ಈ ಸಂಭ್ರಮ ಡಬಲ್‌ ಆಗಿದೆ.

ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು..!

 2023ರ ಜನವರಿ 26ರಂದು ಹರಿಪ್ರಿಯಾ, ವಸಿಷ್ಠ ಸಿಂಹ ಅವರು ಮೈಸೂರಿನಲ್ಲಿ ಮದುವೆಯಾಗಿದ್ದರು.   ನಟಿ ಹರಿಪ್ರಿಯಾಗೆ  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಹೆರಿಗೆ ಆಗಿದ್ದು  ಪುತ್ರನ ಆಗಮನವಾಗಿದೆ.

ಮೈಸೂರಿನ ಆಶ್ರಮದಲ್ಲಿ ಮದುವೆ

ವಸಿಷ್ಠ ಸಿಂಹ ಅವರು ಪತ್ನಿ ಹರಿಪ್ರಿಯಾರ ಸೀಮಂತವನ್ನು ಅದ್ದೂರಿಯಾಗಿ ಮಾಡಿದ್ದರು. ಕನ್ನಡದ ಖ್ಯಾತ ನಟ, ನಟಿಯರು, ನಿರ್ದೇಶಕರು ಈ ಸೀಮಂತಕ್ಕೆ ಆಗಮಿಸಿ, ಈ ಜೋಡಿಗೆ ಶುಭ ಹಾರೈಸಿದ್ದರು. ವಿಭಿನ್ನವಾದ ಸ್ಟೈಲ್‌ನಲ್ಲಿ ಸಂಪ್ರದಾಯದ ಮಿಶ್ರಣದ ಜೊತೆಗೆ ಸೀಮಂತ ಆಗಿತ್ತು. ಇನ್ನು ಇವರ ಮನೆಯಲ್ಲಿ ಬೇಬಿ ಶವರ್‌ ಆಚರಿಸಲಾಗಿತ್ತು. ಈ ಫೋಟೋಗಳನ್ನು ಈ ಜೋಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ, ಅದಕ್ಕೂ ಮುನ್ನ ಈ ದಂಪತಿ ವಿಭಿನ್ನವಾಗಿ ಬೇಬಿ ಬಂಪ್‌ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದೆ.