ನಮ್ಮ ದಾಂಪತ್ಯವನ್ನು ಪುನರ್‌ ನಿರ್ಮಿಸುತ್ತೇವೆ : ಅಜಯ್‌ ರಾವ್ ಪತ್ನಿ

| N/A | Published : Aug 18 2025, 12:37 PM IST

actor ajay rao wife sapna
ನಮ್ಮ ದಾಂಪತ್ಯವನ್ನು ಪುನರ್‌ ನಿರ್ಮಿಸುತ್ತೇವೆ : ಅಜಯ್‌ ರಾವ್ ಪತ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ನಟ ಅಜಯ್‌ ರಾವ್‌ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಅಜಯ್‌ ರಾವ್‌ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸು ಹಾಕಿದ್ದ ಅವರ ಪತ್ನಿ ಸಪ್ನಾ ಅಜಯ್‌ ರಾವ್‌ ಇದೀಗ ಮತ್ತೆ ದಾಂಪತ್ಯದಲ್ಲಿ ಮುಂದುವರಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

 ಸಿನಿವಾರ್ತೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಪ್ನಾ, ‘ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯ. ಇದಕ್ಕಾಗಿ ನಾನು ಪ್ರತಿದಿನ ಧೈರ್ಯವನ್ನೆಲ್ಲ ಒಗ್ಗೂಡಿಸಿ ನನ್ನನ್ನು ತೀವ್ರವಾಗಿ ಪರೀಕ್ಷಿಸುತ್ತಿರುವ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನಾನು ಮತ್ತು ನನ್ನ ಮಗಳು ಬದುಕನ್ನು ಪುನರ್‌ನಿರ್ಮಿಸಿಕೊಳ್ಳಲು ಮುಂದಾಗಿದ್ದೇವೆ. ನಮ್ಮ ದಾಂಪತ್ಯ ಜೀವನವನ್ನು ಪುನಃ ಕಟ್ಟಲು ನಿಮ್ಮ ಪ್ರಾರ್ಥನೆ ಇರಲಿ’ ಎಂದು ಹೇಳಿದ್ದಾರೆ.

‘ಈ ವಿಷಯ ವೈಯುಕ್ತಿಕವಾದುದು, ಆಳವಾದುದು. ಜೊತೆಗೆ ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದೇ ಹೊರತು ಬೇರೆ ಯಾವುದಕ್ಕೂ ಸಂಬಂಧಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Read more Articles on