29 ಸೆಂಚುರಿ ಫಾಕ್ಸ್‌ ಎಂಬ ಹಾಲಿವುಡ್‌ನ ಪ್ರತಿಷ್ಠಿತ ಸ್ಟುಡಿಯೋ ಜೊತೆ ಯಶ್‌ ಮಾತುಕತೆ

| Published : Jan 04 2025, 12:31 AM IST / Updated: Jan 04 2025, 04:58 AM IST

ಸಾರಾಂಶ

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾಕ್ಕೆ 29 ಸೆಂಚುರಿ ಫಾಕ್ಸ್‌ ಎಂಬ ಹಾಲಿವುಡ್ ವಿತರಣ ಸಂಸ್ಥೆ ಸಾಥ್‌ ನೀಡುವ ಸಾಧ್ಯತೆ

 ಸಿನಿವಾರ್ತೆ 

ದೊಡ್ಡ ಗುರಿ ಇಟ್ಟುಕೊಳ್ಳುವುದರಲ್ಲಿ ಯಶ್ ಸದಾ ಮುಂದು. ಇದೀಗ ಅವರು ಹಾಲಿವುಡ್‌ ಕಡೆ ಗುರಿ ಇಟ್ಟಿದ್ದಾರೆ. ‘ಪ್ಯಾನ್‌ ವರ್ಲ್ಡ್‌’ ಸಿನಿಮಾ ಕನಸು ಹೊತ್ತಿರುವ ಯಶ್‌ ತಮ್ಮ ‘ಟಾಕ್ಸಿಕ್‌’ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಜನಪ್ರಿಯ ಹಾಲಿವುಡ್‌ ನಿರ್ಮಾಣ ಹಾಗೂ ವಿತರಣಾ ಸಂಸ್ಥೆ 20 ಸೆಂಚುರಿ ಫಾಕ್ಸ್‌ ಸ್ಟುಡಿಯೋ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿದೆ.‘ 

20 ಸೆಂಚುರಿ ಫಾಕ್ಸ್‌ ಸ್ಟುಡಿಯೋ ಜೊತೆಗೆ ಯಶ್‌ ಚರ್ಚೆ ನಡೆಸಿದ್ದು ನಿಜ. ಅದಿನ್ನೂ ಆರಂಭಿಕ ಹಂತದಲ್ಲಿದೆ. ಆದರೆ ‘ಟಾಕ್ಸಿಕ್’ ಅನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ಟಾಕ್ಸಿಕ್‌ನ ಕಥೆಯ ನಿರೂಪಣಾ ಮಾದರಿ ಮತ್ತು ದೃಶ್ಯ ವೈಭವ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂಬ ಲೆಕ್ಕಾಚಾರ ಯಶ್‌ ಅವರದು. ಹೀಗಾಗಿ ಜಾಗತಿಕ ಮಟ್ಟದ ಹೆಸರಾಂತ ವಿತರಣಾ ಸಂಸ್ಥೆಗಳ ಜೊತೆ ಪಾಲುದಾರಿಕೆಯ ಸಾಧ್ಯತೆಗಳ ಕುರಿತು ಚರ್ಚಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ. ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌’ ಸಿನಿಮಾವನ್ನು ವೆಂಕಟ್‌ ನಾರಾಯಣ್‌ ನಿರ್ಮಾಣ ಮಾಡುತ್ತಿದ್ದಾರೆ.