ಸಾರಾಂಶ
ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ನೇಕಾರರ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಬೇಕು
ಕನ್ನಡಪ್ರಭವಾರ್ತೆ ಅಮೀನಗಡ
ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ನೇಕಾರರ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರಗೆ ರಾಜ್ಯ ನೇಕಾರ ಸಮುದಾಯದ ಯುವಮುಖಂಡ ವಿಜಯಕುಮಾರ ಭಾಪ್ರಿ ಮನವಿ ಸಲ್ಲಿಸಿದರು.ಸದ್ಯ ನನೆಗುದಿಗೆ ಬಿದ್ದಿರುವ ಹಲವು ಬೇಡಿಕೆಗಳು, ಗುಡಿ ಕೈಗಾರಿಕೆಗಳಲ್ಲಿ ಬರುವ ನೇಕಾರಿಕೆಯಲ್ಲಿ ವೃತ್ತಿನಿರತ ನೇಕಾರರು, ನೇಯ್ಗೆಯಲ್ಲಿ ಇತರೆ ಸೇವೆ ಸಲ್ಲಿಸುವ ಉಪಕಸುಬುದಾರರನ್ನು ಸರ್ಕಾರ ಕಾರ್ಮಿಕರೆಂದು ಪರಿಗಣಿಸಿ, ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲ ಯೋಜನೆಗಳು ಸೌಲಭ್ಯಗಳನ್ನು ವಿಸ್ತರಿಸುವುದು, ಕೈಮಗ್ಗ ಅಭಿವೃದ್ಧಿ ನಿಗಮದ ನೇಕಾರರಿಗೆ ವೇಳೆಗನುಸಾರವಾಗಿ ನೂಲು ಪೂರೈಕೆ ಸೇರಿ ಹಲವು ಬೇಡಿಕೆಗಳ ಬಗ್ಗೆ ಚಳಿಗಾಳ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಒತ್ತಾಯಿಸಿದರು.