2024ರಲ್ಲೇ ದುರಂತದ ಬಗ್ಗೆ ಎಚ್ಚರಿಸಿದ್ದ ಜ್ಯೋತಿಷಿ ಶರ್ಮಿಷ್ಠಾ!

| Published : Jun 13 2025, 04:08 AM IST

ಸಾರಾಂಶ

ಶರ್ಮಿಷ್ಠಾ ಎಂಬ ಜ್ಯೋತಿಷಿಯೊಬ್ಬರು 2025ರಲ್ಲಿ ದೇಶದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸುವುದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲೇ ಎಚ್ಚರಿಸಿದ್ದರು ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.

-2025 ಪಾಕ್‌ಗೆ ಕಠಿಣ ವರ್ಷ ಎಂದೂ ಪೋಸ್ಟ್

ಅಹಮದಾಬಾದ್: ಶರ್ಮಿಷ್ಠಾ ಎಂಬ ಜ್ಯೋತಿಷಿಯೊಬ್ಬರು 2025ರಲ್ಲಿ ದೇಶದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸುವುದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲೇ ಎಚ್ಚರಿಸಿದ್ದರು ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.

ಈ ಕುರಿತು ತಾವು 2024ರ ಡಿಸೆಂಬರ್‌ನಲ್ಲೇ ಎಚ್ಚರಿಸಿದ್ದ ‘ಎಕ್ಸ್’ ಪೋಸ್ಟನ್ನು ಶರ್ಮಿಷ್ಠಾ ಪುನಃ ಹಂಚಿಕೊಂಡಿದ್ದಾರೆ. 2024ರ ಡಿ.29ರಂದು ಪೋಸ್ಟ್ ಮಾಡಿದ್ದ ಅವರು, ‘2025ರಲ್ಲಿ ವಿಮಾನಯಾನ ಕ್ಷೇತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ವಿಮಾನ ಅಪಘಾತದ ಸುದ್ದಿಗಳು ನಮಗೆ ಆಘಾತವನ್ನುಂಟು ಮಾಡಬಹುದು. ಗುರುವು ತಿಂಗಳಿಗೆ ಸುಮಾರು 6.5 ಡಿಗ್ರಿ ವೇಗದಲ್ಲಿ ಮೃಗಶಿರ ಮತ್ತು ಆರ್ದ್ರಾದ ಮಿಥುನ ಭಾಗದಲ್ಲಿರುವುದರಿಂದ, ವಿಮಾನಯಾನವು ಅಭಿವೃದ್ಧಿ ಹೊಂದುತ್ತದೆ. ಆದರೆ ಸುರಕ್ಷತೆ ಮತ್ತು ಭದ್ರತೆ ಕಣ್ಮರೆಯಾಗುತ್ತದೆ’ ಎಂದಿದ್ದರು. ಅಲ್ಲದೆ, 2024ರ ಸೆಪ್ಟೆಂಬರ್‌ನಲ್ಲೇ, ‘2025 ಪಾಕಿಸ್ತಾನಕ್ಕೆ ಅತ್ಯಂತ ಕಠಿಣ ವರ್ಷವಾಗಲಿದೆ, ಅವರ ಸೈನ್ಯವೂ ಅಸಹಾಯಕವಾಗುತ್ತದೆ. ಇಮ್ರಾನ್ ಖಾನ್ ಕೆಲವೇ ತಿಂಗಳುಗಳಲ್ಲಿ ಜೈಲಿನಿಂದ ಹೊರಬರಬಹುದು. ಪಾಕಿಸ್ತಾನವು ಆಹಾರ ಬಿಕ್ಕಟ್ಟು, ನೈಸರ್ಗಿಕ ವಿಕೋಪ, ಅಂತರ್ಯುದ್ಧ, ಹೆಚ್ಚಿನ ಸಾವು ಇತ್ಯಾದಿಗಳನ್ನು ಎದುರಿಸಲಿದೆ. ಪಾಕಿಸ್ತಾನ ಭಾಗಗಳಾಗಿ ವಿಭಜನೆಯಾಗಲಿದೆ’ ಎಂದಿದ್ದರು. ಪಾಕಿಸ್ತಾನದ ಕುರಿತು ಅವರು ಹೇಳಿದ ಸಂಗತಿಗಳು ಬಹುತೇಕ ನಿಜವಾಗಿವೆ. ಇದೀಗ ವಿಮಾನ ಅಪಘಾತದ ಬಗ್ಗೆ ಅವರು ಮಾಡಿದ್ದ ಪೋಸ್ಟ್ ವೈರಲ್ ಆಗುತ್ತಿದೆ.