ಸೂಕ್ತ ಸಮಯದಲ್ಲಿ ಸರಿಯಾದ ಹೆಜ್ಜೆ : ರಾಜನಾಥ್‌

| N/A | Published : Nov 08 2025, 03:15 AM IST

Rajnath Singh

ಸಾರಾಂಶ

‘ಭಾರತವು ಪರಮಾಣು ಪರೀಕ್ಷೆ ಮತ್ತು ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಎಂದಿಗೂ ಬೇರೆ ದೇಶಗಳ ಒತ್ತಡಕ್ಕೆ ಒಳಗಾಗುವುದಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

 ನವದೆಹಲಿ: ‘ಭಾರತವು ಪರಮಾಣು ಪರೀಕ್ಷೆ ಮತ್ತು ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಎಂದಿಗೂ ಬೇರೆ ದೇಶಗಳ ಒತ್ತಡಕ್ಕೆ ಒಳಗಾಗುವುದಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ನೀಡಿದ ಹೇಳಿಕೆಗೆ ಟೀವಿ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಅವರು‘ ರಾಷ್ಟ್ರೀಯ ಭದ್ರತೆ ಅಥವಾ ಪರಮಾಣು ಪರೀಕ್ಷೆಯ ವಿಷಯಗಳಲ್ಲಿ ಭಾರತವು ಬೇರೆ ಯಾವುದೇ ದೇಶದ ನಿರ್ದೇಶನ ಅಥವಾ ಒತ್ತಡಕ್ಕೆ ಒಳಗಾಗುವುದಿಲ್ಲ. ಸರ್ಕಾರ ಯಾವಾಗಲೂ ಕೇವಲ ರಾಷ್ಟ್ರದ ಹಿತಾಸಕ್ತಿಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳುತ್ತದೆ’ ಎಂದರು.ಅಣ್ವಸ್ತ್ರ ಪರೀಕ್ಷೆ ವಿಚಾರದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಬೆಳವಣಿಗೆ ಕುರಿತು ಮಾತನಾಡಿದ ಅವರು, ‘ ಭವಿಷ್ಯವು, ಭಾರತ ಏನು ಮಾಡುತ್ತದೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ ಹೊರತು ಪಾಕಿಸ್ತಾನ ಮತ್ತು ಅಮೆರಿಕ ಏನು ಮಾಡುತ್ತದೆ ಎನ್ನುವುದರ ಮೇಲೆ ಒತ್ತಡಕ್ಕೆ ಒಳಗಾಗುವುದಿಲ್ಲ. ಅವರಿಗೆ ಏನು ಮಾಡಬೇಕು ಅದನ್ನು ಮಾಡುತ್ತಾರೆ. ನಮಗೆ ಸರಿಯಿದೆ ಎನಿಸಿದ್ದನ್ನು ನಾವು ಸರಿಯಾದ ಸಮಯದಲ್ಲಿ ಮಾಡುತ್ತೇವೆ’ ಎಂದರು.ಇದೇ ವೇಳೆ ಅವರು ಭಾರತ ನಡೆಸಿದ ಆಪರೇಷನ್‌ ಸಿಂದೂರ ಮತ್ತು ಪಾಕಿಸ್ತಾನ ಜತೆಗಿನ ಕದನ ವಿರಾಮದ ಸಂದರ್ಭದಲ್ಲಿ ಮೂರನೇ ವ್ಯಕ್ತಿಯ ಭಾಗವಹಿಸುವಿಕೆಯನ್ನು ತಳ್ಳಿ ಹಾಕಿದರು. ಅಲ್ಲದೇ ‘ಭಾರತ ತನ್ನ ಗುರಿ ಸಾಧಿಸಿದ ನಂತರವೇ ಗಡಿಯಲ್ಲಿ ನಮ್ಮ ಸೇನಾ ಕಾರ್ಯಾಚರಣೆ ನಿಂತಿದ್ದು, ಅಗತ್ಯವಿದ್ದರೆ ಮತ್ತೆ ಮಾಡುತ್ತೇವೆ’ ಎಂದು ಹೇಳಿದರು.

ರಹಸ್ಯ ಅಣ್ವಸ್ತ್ರ ಪಾಕ್ ಕಾರ್ಯಸೂಚಿಯ ಭಾಗ: ಭಾರತ

ಪಾಕಿಸ್ತಾನ ಸದ್ದಿಲ್ಲದೆ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿದೆ ಎನ್ನುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು, ‘ಟ್ರಂಪ್‌ ಹೇಳಿಕೆಯನ್ನು ಗಮನಿಸಿದ್ದೇವೆ. ಪಾಕಿಸ್ತಾನಕ್ಕೆ ರಹಸ್ಯ ಪರಮಾಣು ಚಟುವಟಿಕೆಗಳನ್ನು ನಡೆಸುವುದಕ್ಕೆ ದಶಕಗಳ ಇತಿಹಾಸವೇ ಇದೆ’ ಎಂದಿದೆ. ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಹಸ್ಯ ಮತ್ತು ಅಕ್ರಮ ಪರಮಾಣು ಚಟುವಟಿಕೆಗಳ ವಿಚಾರದಲ್ಲಿ ಪಾಕಿಸ್ತಾನಕ್ಕೆ ಸುದೀರ್ಘ ಇತಿಹಾಸವೇ ಇದೆ. ಅದು ದಶಕಗಳಿಂದ ಕಳ್ಳಸಾಗಣೆ, ರಫ್ತು ನಿಯಂತ್ರಣ ಉಲ್ಲಂಘಟನೆ, ರಹಸ್ಯ ಪಾಲುದಾರಿಕೆಗಳಲ್ಲಿ ಕೇಂದ್ರೀಕೃತವಾಗಿದೆ.  

ಪಾಕಿಸ್ತಾನದ ಬುದ್ಧಿ

ಪಾಕಿಸ್ತಾನದ ಬುದ್ಧಿಯ ಬಗ್ಗೆ ಭಾರತ ಯಾವಾಗಲೂ ಅಂತಾರಾಷ್ಟ್ರೀಯ ಸಮುದಾಯಗಳ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪರಮಾಣು ಪರೀಕ್ಷೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆಯನ್ನು ಗಮನಿಸಿದ್ದೇವೆ’ ಎಂದು ಹೇಳಿದರು.ಪಾಕ್‌ ಮೇಲಿನ ದಾಳಿಗೆ ಇಂದಿರಾ ಸಮ್ಮತಿಸಲಿಲ್ಲ: ಬಾರ್ಲೋವಾಷಿಂಗ್ಟನ್: 1980 ರ ದಶಕದಲ್ಲಿ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಪಾಕಿಸ್ತಾನದ ಕಹುತಾ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಲು ಯೋಜಿಸಿದ್ದವು ಎಂಬ ವರದಿಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ, ‘ಹೌದು. ಇಂದಿರಾ ಗಾಂಧಿ ಈ ದಾಳಿಯನ್ನು ಅನುಮೋದಿಸಲಿಲ್ಲ, ಇದು ನಾಚಿಕೆಗೇಡು. ಅವರು ಒಪ್ಪಿದ್ದರೆ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಯುತ್ತಿದ್ದವು’ ಎಂದಿದ್ದಾರೆ.

Read more Articles on