‘ವಾಲ್ಮೀಕಿ ಜಯಂತಿಯನ್ನು ಗೌರವಯುತವಾಗಿ ಆಚರಿಸೋಣ’
KannadaprabhaNewsNetwork | Published : Oct 11 2023, 12:46 AM IST
‘ವಾಲ್ಮೀಕಿ ಜಯಂತಿಯನ್ನು ಗೌರವಯುತವಾಗಿ ಆಚರಿಸೋಣ’
ಸಾರಾಂಶ
ಪ್ರತಿಯೊಬ್ಬರಲ್ಲೂ ಅವರವರ ಸಮುದಾಯದ ಬಗ್ಗೆ ಸ್ವಾಭಿಮಾನ ಹೆಚ್ಚಾಗಿದೆ. ಹಾಗಾಗಿ 28ರ ಮಹಷಿ೯ ವಾಲ್ಮೀಕಿ ಜಯಂತಿಯಲ್ಲಿ ನಾಯಕ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ನಾವೆಲ್ಲರೂ ಸೇರಿ ಮಹಷಿ೯ಗೆ ಗೌರವ ತರುವ ನಿಟ್ಟಿನಲ್ಲಿ ಕಾಯ೯ಕ್ರಮ ರೂಪಿಸೋಣ ಎಂದು ಶಾಸಕ ಎ.ಆರ್ ಕೖಷ್ಣಮೂತಿ೯ ಹೇಳಿದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಕರೆ ಕನ್ನಡ ಪ್ರಭ ವಾರ್ತೆ ಕೊಳ್ಳೇಗಾಲ: ಪ್ರತಿಯೊಬ್ಬರಲ್ಲೂ ಅವರವರ ಸಮುದಾಯದ ಬಗ್ಗೆ ಸ್ವಾಭಿಮಾನ ಹೆಚ್ಚಾಗಿದೆ. ಹಾಗಾಗಿ 28ರ ಮಹಷಿ೯ ವಾಲ್ಮೀಕಿ ಜಯಂತಿಯಲ್ಲಿ ನಾಯಕ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ನಾವೆಲ್ಲರೂ ಸೇರಿ ಮಹಷಿ೯ಗೆ ಗೌರವ ತರುವ ನಿಟ್ಟಿನಲ್ಲಿ ಕಾಯ೯ಕ್ರಮ ರೂಪಿಸೋಣ ಎಂದು ಶಾಸಕ ಎ.ಆರ್ ಕೖಷ್ಣಮೂತಿ೯ ಹೇಳಿದರು. ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಕರೆಯಲಾಗಿದ್ದ ವಾಲ್ಮೀಕಿ ಜಯಂತಿ ಆಚರಣಾ ಸಮಿತಿ ಪೂವ೯ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಯಕ ಸಮಾಜ ಕಟ್ಟೆ ಮನೆ, ಗಡಿಮನೆ ಮುಖಂಡರ ಸಭೆ ನಡೆಸಿ ನಿಮ್ಮ ಅಭಿಪ್ರಾಯ ತಿಳಿಸಿ ಕಾಯ೯ಕ್ರಮ ಯಶಸ್ವಿಗೆ ಸಹಕರಿಸಿ, ಕೋವಿಡ್ ಹಿನ್ನೆಲೆ ಈ ಹಿಂದೆ ಸರಳವಾಗಿಯೇ ಮಹಷಿ೯ ಜಯಂತಿ ಆಚರಿಸಲಾಗುತ್ತಿತ್ತು, ಈ ಬಾರಿ ಉತ್ತಮ ರೀತಿ ಆಚರಣೆ ಹಿನ್ನೆಲೆ ಸಹಕರಿಸಬೇಕು, ಅಧಿಕಾರಿಗಳು ವಾಲ್ಮೀಕಿ ಜಯಂತಿಗೆ ಗೌರವ ತರುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದರು. ಸಮಾರಂಭದಲ್ಲಿ ಬರುವ ಅತಿಥಿಗಳು, ಗಣ್ಯರಿಗೆ ಉಪಹಾರ ನೀಡುವ ಜೊತೆಗೆ ಉತ್ತಮ ರೀತಿಯಲ್ಲಿ ಗೌರವಯುತವಾಗಿ ಜಯಂತಿ ಆಚರಿಸೋಣ, ನಾನು ಸಹಾ ಸಮಾಜದ ಜೊತೆಗಿರುವೆ ಎಂದರು. ನಾಯಕ ಸಮುದಾಯದ ಮುಖಂಡರುಗಳು ಮಾತನಾಡಿ, ನಾಯಕ ಜನಾಂಗ ಒಗ್ಗೂಡಿ ಉತ್ತಮ ರೀತಿಯಲ್ಲಿ ಕಾಯ೯ಕ್ರಮ ಅಯೋಜಿಸಬೇಕಿರುವುದರಿಂದ ನಮ್ಮ ಜನಾಂಗಗಳ ಮುಖಂಡರ ಜೊತೆ ಸಭೆ ಕರೆದು, ಚಚಿ೯ಸಿ ಯಾವ ರೀತಿ ಆಚರಿಸಬೇಕು ಎಂಬುದನ್ನ ನಾವು ತಿಳಿಸುತ್ತೇವೆ ಎಂದರು. ಸಭೆಯಲ್ಲಿ ತಹಶೀಲ್ದಾರ್ ಮಂಜುಳಾ, ಇಒ ಶ್ರೀನಿವಾಸ್, ನಾಯಕ ಸಂಘದ ತಾಲ್ಲೂಕು ಅಧ್ಯಕ್ಷ ಜಗದೀಶ್, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿನಾಯಕ, ಪಾಳ್ಯ ಕೖಷ್ಣ, ಸುಂದರ್, ಚಿಕ್ಕಮಾಧು ಇನ್ನಿತರಿದ್ದರು. -------- 10ಕೆಜಿಎಲ್4 ತಾಲೂಕು ಪಂಚಾಯ್ತಿಯಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಸಭೆಯಲ್ಲಿ ಶಾಸಕ ಕೖಷ್ಣಮೂತಿ೯ ಮಾತನಾಡಿದರು. ತಹಸಿಲ್ದಾರ್ ಮಂಜುಳ ಇನ್ನಿತರಿದ್ದರು. ----