.ಬಂಡಿದಾರಿ ಬಿಡಿಸುವ ತನಕ ರೈತಸಂಘ ಅಹೋರಾತ್ರಿ ಪ್ರತಿಭಟನೆ

| Published : Oct 13 2023, 12:15 AM IST

ಸಾರಾಂಶ

ತಾಲೂಕಿನ ಹಿರೀಕಾಟಿ ಗ್ರಾಮದ ರೈತರೊಬ್ಬರ ಜಮೀನಿಗೆ ತೆರಳುತ್ತಿದ್ದ ಬಂಡಿ ದಾರಿ ಬಿಡಿಸಿಕೊಡಬೇಕು ಎಂದು ಆಗ್ರಹಿಸಿ ರೈತಸಂಘ ಕಾರ್ಯಕರ್ತರು ರೈತನ ಜಾನುವಾರುಗಳನ್ನು ತಾಲೂಕು ಕಚೇರಿಯ ಕಂಬಕ್ಕೆ ಕಟ್ಟಿ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದ ಪ್ರತಿಭಟನಾಕಾರರು ತಾಲೂಕು ಆಡಳಿತದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.
ಇಂದು ಪೊರಕೆ ಚಳುವಳಿ | 20 ದಿನ ಕಾಲಾವಕಾಶ ಕೇಳಿದ ತಹಸೀಲ್ದಾರ್‌ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗ್ರಾಮದ ರೈತರೊಬ್ಬರ ಜಮೀನಿಗೆ ತೆರಳುತ್ತಿದ್ದ ಬಂಡಿ ದಾರಿ ಬಿಡಿಸಿಕೊಡಬೇಕು ಎಂದು ಆಗ್ರಹಿಸಿ ರೈತಸಂಘ ಕಾರ್ಯಕರ್ತರು ರೈತನ ಜಾನುವಾರುಗಳನ್ನು ತಾಲೂಕು ಕಚೇರಿಯ ಕಂಬಕ್ಕೆ ಕಟ್ಟಿ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದ ಪ್ರತಿಭಟನಾಕಾರರು ತಾಲೂಕು ಆಡಳಿತದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು. ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಶಿವಪುರ ಗ್ರಾಪಂ ಅಧ್ಯಕ್ಷ ಮಹದೇವಪ್ಪ ಮಾತನಾಡಿ, ಹಿರೀಕಾಟಿ ಗ್ರಾಮದ ರೈತ ರೇವಣ್ಣನ ಜಮೀನಿಗೆ ತೆರಳಲು 7 ಗುಂಟೆ ಬಂಡಿ ದಾರಿ ಬಿಡಲಾಗಿತ್ತು. ನೆರೆಯ ಜಮೀನಿನಲ್ಲಿ ಪೋಡಿ ಮಾಡುವ ಸಮಯದಲ್ಲಿ ಬಂಡಿ ದಾರಿ 7 ಗುಂಟೆ ಬದಲಿಗೆ 5 ಗುಂಟೆ ಜಾಗವನ್ನು ಆರ್‌ಟಿಸಿಯಲ್ಲಿ ದಾಖಲಿಸಿ, 2 ಗುಂಟೆ ಜಾಗ ಬಂಡಿದಾರಿಗೆ ಬಿಟ್ಟಿದ್ದಾರೆ. ರೈತರಿಗೆ ಜಮೀನಿಗೆ ತೆರಳಲು ಬಂಡಿದಾರಿಯನ್ನು ಬಿಡಿಸಿಕೊಡಬೇಕು ಎಂದು ಆಗ್ರಹಿಸಿದರು. ಕಳೆದ ಎರಡು ವರ್ಷಗಳಿಂದಲೂ ಅಂದಿನ ಜಿಲ್ಲಾ ಮಂತ್ರಿ,ಜಿಲ್ಲಾಧಿಕಾರಿ,ತಹಸೀಲ್ದಾರ್‌ ಹಾಗು ಶಾಸಕರಿಗೆ ರೈತ ದೂರು ನೀಡಿದ್ದಾರೆ ಆದರೆ ಇಲ್ಲಿಯವರೆಗೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದರು.ಇತ್ತೀಚೆಗೆ ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಪ್ರಸ್ತುತ ಜಿಲ್ಲಾಧಿಕಾರಿ, ತಹಸೀಲ್ದಾರ್‌ ಹಾಗೂ ಶಾಸಕರಿಗೂ ದೂರು ನೀಡಲಾಗಿದೆ. ಆದರೂ ಸಹ ಬಂಡಿ ದಾರಿ ಬಿಡಿಸಿ ಕೊಡಲು ಆಗಿಲ್ಲ ಎಂದು ಆರೋಪಿಸಿದರು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಹಾಗು ಎಡಿಎಲ್‌ ಆರ್‌ ಸುರೇಶ್‌ ಆಗಮಿಸಿ ರೈತರ ಸಮಸ್ಯೆ ಆಲಿಸಿದ ಬಳಿಕ 20 ದಿನಗಳ ಕಾಲಾವಕಾಶ ಕೊಡಿ, ಪ್ರತಿಭಟನೆ ಕೈ ಬಿಡಿ ಎಂದು ಮನವಿ ಮಾಡಿದರು. ರೈತರು ಒಪ್ಪದೆ ಪ್ರತಿಭಟನೆ ಮುಂದುವರಿಸಿದರು. ಕನ್ನಡಪ್ರಭದ ಸುದ್ದಿಗಾರರೊಂದಿಗೆ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ರೈತನ ಸಮಸ್ಯೆ ಪರಿಹಾರ ಸಿಗುವ ತನಕ ಪ್ರತಿಭಟನೆ ಅನಿರ್ಧಿಷ್ಟಕಾಲ ನಡೆಯಲಿದೆ ಎಂದರು. ಬಾಕ್ಸ್.... ಪೊರಕೆ ಚಳುವಳಿ ರೈತನ ಜಮೀನಿನ ಬಂಡಿ ದಾರಿಗೆ ಮುಕ್ತಿ ಸಿಗುವವರೆಗೂ ಅನಿರ್ಧಿಷ್ಟಕಾಲ ನಡೆಯುವ ಪ್ರತಿಭಟನೆಯಲ್ಲಿ ನಾನಾ ರೀತಿ ನಡೆಯಲಿದ್ದು, ಶುಕ್ರವಾರದ ಪ್ರತಿಭಟನೆಯಲ್ಲಿ ಪೊರಕೆ ಚಳುವಳಿ ನಡೆಸುವುದಾಗಿ ಎಚ್ಚರಿಸಿದರು. ಜಿಲ್ಲಾ ರೈತಸಂಘದ ಕಾರ್ಯಾಧ್ಯಕ್ಷ ಟಿ.ಎಸ್.ಶಾಂತಮಲ್ಲಪ್ಪ,ತಾಲೂಕು ಅಧ್ಯಕ್ಷ ಹಂಗಳ ದೀಲೀಪ್‌,ಮುಖಂಡರಾದ ಮಳವಳ್ಳಿ ಮಹೇಂದ್ರ,ನಾಗರಾಜಪ್ಪ, ಪಾಪಣ್ಣ,ಶಿವಣ್ಣ, ಹಿರೀಕಾಟಿ ಅಶೋಕ್‌,ರೇವಣ್ಣ,ಮಹದೇವಸ್ವಾಮಿ ಸೇರಿದಂತೆ ಹಲವರಿದ್ದರು. - 12ಜಿಪಿಟಿ34 ಗುಂಡ್ಲುಪೇಟೆ ತಾಲೂಕು ಕಚೇರಿ ಮುಂದೆ ನಡೆದ ರೈತಸಂಘದ ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿದರು.