ಮೃತರ ಅಂತ್ಯಕ್ರಿಯೆಯಲ್ಲಿ ಉಗ್ರರು, ಯೋಧರು ಭಾಗಿ

| N/A | Published : May 08 2025, 12:33 AM IST / Updated: May 08 2025, 04:41 AM IST

ಮೃತರ ಅಂತ್ಯಕ್ರಿಯೆಯಲ್ಲಿ ಉಗ್ರರು, ಯೋಧರು ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ದಾಳಿಯಲ್ಲಿ ಹತರಾದ 80 ಜನರ ಅಂತ್ಯಕ್ರಿಯೆ ಬುಧವಾರ ಸಂಜೆ ಪಾಕಿಸ್ತಾನದ ವಿವಿಧೆಡೆ ನಡೆದಿದೆ. ಈ ಪೈಕಿ ಲಾಹೋರ್ ಬಳಿಯ ಮುರೀದ್ಕೆಯಲ್ಲಿ ಸಾವನ್ನಪ್ಪಿದ 3 ಪುರುಷರ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವವನ್ನು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಹಫೀಜ್ ಅಬ್ದುಲ್ ರೌಫ್ ವಹಿಸಿದ್ದ.

ಲಾಹೋರ್‌: ಭಾರತದ ದಾಳಿಯಲ್ಲಿ ಹತರಾದ 80 ಜನರ ಅಂತ್ಯಕ್ರಿಯೆ ಬುಧವಾರ ಸಂಜೆ ಪಾಕಿಸ್ತಾನದ ವಿವಿಧೆಡೆ ನಡೆದಿದೆ. ಈ ಪೈಕಿ ಲಾಹೋರ್ ಬಳಿಯ ಮುರೀದ್ಕೆಯಲ್ಲಿ ಸಾವನ್ನಪ್ಪಿದ 3 ಪುರುಷರ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವವನ್ನು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಹಫೀಜ್ ಅಬ್ದುಲ್ ರೌಫ್ ವಹಿಸಿದ್ದ. 

ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ, ಪೊಲೀಸರು, ನಾಗರಿಕ ಅಧಿಕಾರಿಗಳು ಮತ್ತು ಹಫೀಜ್ ಸಯೀದ್ ಸ್ಥಾಪಿಸಿದ ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸದಸ್ಯರು ಭಾಗವಹಿಸಿದ್ದರು.

ಭಾರತದ 16 ಯೂಟ್ಯೂಬ್, 32 ವೆಬ್‌ಸೈಟ್‌ಗಳಿಗೆ ಪಾಕ್‌ ನಿರ್ಬಂಧ

ಇಸ್ಲಾಮಾಬಾದ್‌: ಪಾಕಿಸ್ತಾನದ ವಿರುದ್ಧ ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನವು ಭಾರತದ 16 ಯೂಟ್ಯೂಬ್ ಚಾನೆಲ್‌ಗಳು, 31 ಯೂಟ್ಯೂಬ್ ಲಿಂಕ್ಸ್‌, 32 ಜಾಲತಾಣಗಳನ್ನು ನಿರ್ಬಂಧಿಸಿದೆ. 

ಪಾಕಿಸ್ತಾನದ ದೂರ ಸಂಪರ್ಕ ಪ್ರಾಧಿಕಾರ(ಪಿಟಿಎ) ಈ ಕ್ರಮ ಕೈಗೊಂಡಿದ್ದು, ‘ರಾಷ್ಟ್ರೀಯ ಭದ್ರತೆ ಮತ್ತು ಪಾಕಿಸ್ತಾನದ ಡಿಜಿಟಲ್ ವ್ಯವಸ್ಥೆಯನ್ನು ರಕ್ಷಿಸಲು ಪ್ರಾದೇಶಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 16 ಭಾರತೀಯ ಯೂಟ್ಯೂಬ್ ಸುದ್ದಿ ಚಾನೆಲ್‌ಗಳು, 31 ಯೂಟ್ಯೂಬ್ ಲಿಂಕ್‌ಗಳು ಮತ್ತು 32 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಗಿದೆ’ ಎಂದಿದೆ.