ಸಾರಾಂಶ
ದಾಬಸ್‌ಪೇಟೆ: ಹಿರಿಯ ನಟಿ ಡಾ.ಲೀಲಾವತಿಯವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸಿಸಿಟಿವಿಯಲ್ಲಿ ಚಿರತೆ ಓಡಾಟ ಸೆರೆಯಾಗಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿರುವ ತೋಟದ ಗೇಟ್ ಬಳಿ ನ.21ರಂದು ರಾತ್ರಿ ಸುಮಾರು 10.30ರ ವೇಳೆಯಲ್ಲಿ ಸುಮಾರು ಐದೂವರೆ ಅಡಿ ಉದ್ದವಿರುವ ಚಿರತೆ ಕಾಣಿಸಿಕೊಂಡಿದೆ. ಮರುದಿನ ಬೆಳ್ಳಗೆ 10 ಗಂಟೆಯಲ್ಲಿ ನಟ ವಿನೋದ್ ರಾಜ್ ಅವರು ಸಿಸಿ ಕ್ಯಾಮರಾ ಪರಿಶೀಲಿಸಿದ ವೇಳೆ ಚಿರತೆ ಸಂಚಾರ ಕಾಣಿಸಿಕೊಂಡಿದೆ. ಗೇಟ್ ಮುಂದೆ ಚಿರತೆ ಓಡಾಡಿದ್ದು ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ತೋಟದಲ್ಲಿ ಕೆಲಸ ಮಾಡುವವರು ಆತಂಕ ವ್ಯಕ್ತಪಡಿಸಿದ್ದಾರೆ.
ಚಿರತೆ ಓಡಾಟ ಹೆಚ್ಚು:ಸೋಲದೇವನಹಳ್ಳಿ, ಬಾಣಸವಾಡಿ, ಆಗಳಗುಪ್ಪೆ, ಚೌಡಸಂದ್ರ, ಹಂದಿಗುಟ್ಟೆ ಸೇರಿದಂತೆ ಅನೇಕ ಗ್ರಾಮದ ಸುತ್ತಮುತ್ತಲು ಚಿರತೆ ಓಡಾಟ ಕಂಡು ಬರುತ್ತಿದ್ದು ಹಂದಿಗುಟ್ಟೆ ಸಮೀಪ ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಬೋನು ವ್ಯವಸ್ಥೆ ಮಾಡಿದ್ದಾರೆ.
ನಟ ವಿನೋದ್ ರಾಜ್ ಮಾತನಾಡಿ, ಕಾಡಿನ ಕಡೆ ಮನುಷ್ಯ ಬಂದಿದ್ದಾನೆ ಆದ್ದರಿಂದ ಮನುಷ್ಯ ಇರುವ ಕಡೆ ಕಾಡು ಪ್ರಾಣಿಗಳು ಬರುತ್ತಿವೆ. ನಮ್ಮ ತೋಟದ ಬಳಿ ಚಿರತೆ ಓಡಾಡಿರುವುದು ಸುತ್ತಮುತ್ತಲ ಗ್ರಾಮಗಳಲ್ಲಿ ಭಯದ ವಾತವರಣ ಉಂಟಾಗಿದೆ. ಚಿರತೆ ಸೆರೆ ಹಿಡಿದು ಸೂಕ್ತ ಸ್ಥಳಕ್ಕೆ ಬಿಟ್ಟರೆ ಒಳ್ಳೆಯದು ಎಂದರು.ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ: ಸೋಲದೇವನಹಳ್ಳಿ, ಬಾಣಸವಾಡಿ, ಆಗಳಗುಪ್ಪೆ, ಚೌಡಸಂದ್ರ, ಹಂದಿಗುಟ್ಟೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅತಂಕ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಅರಣ್ಯಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
ಪೋಟೋ 4 : ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ಹಿರಿಯ ನಟಿ ಡಾ.ಲೀಲಾವತಿಯವರ ತೋಟದ ಬಳಿ ಸಿಸಿಟಿವಿಯಲ್ಲಿ ಸೆರೆಯಾಗಿರುವ ಚಿರತೆ.ಪೋಟೋ 5 : ಬೋನ್ ವ್ಯವಸ್ಥೆ ಮಾಡಿರುವುದು