ಮೋದಿ ನೇತೃತ್ವದ ಸರ್ಕಾರ 3ನೇ ಬಾರಿ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದ್ದು, ಸೆ.17 ರಂದು ಮೋದಿ 74ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ 3ನೇ ಬಾರಿ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದು ಭಾನುವಾರ 100 ದಿನ ಸಂದಿದೆ. ಇದೇ ವೇಳೆ, ನರೇಂದ್ರ ಮೋದಿ ಅವರು ಸೆ.17ರ ಮಂಗಳವಾರ 74 ವಸಂತಗಳನ್ನು ಪೂರೈಸುತ್ತಿದ್ದಾರೆ.
ಹೆಚ್ಚೂ ಕಡಿಮೆ ಈ ಎರಡೂ ದಿನಾಚರಣೆಗಳು ಹಿಂದೆ ಮುಂದೆ ಬಂದಿದ್ದು, ಇದೇ ಸಂದರ್ಭವನ್ನು ಬಳಸಿ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಸರ್ಕಾರದ 100 ದಿನದ ಸಾಧನೆಗಳನ್ನು ವಿವರಿಸಲು ದೇಶಾದ್ಯಂತ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.