ಶೇ.100ರಷ್ಟು ಇಪಿಎಫ್‌ ಹಣ ಹಿಂಪಡೆಯುವಿಕೆಗೆ ಅವಕಾಶ

| N/A | Published : Oct 14 2025, 11:34 AM IST

Bank account linked to the EPF account

ಸಾರಾಂಶ

ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌ಒ) ಮಂಡಳಿ ನಿಧಿಯಲ್ಲಿ ಹಿಂಪಡೆಯಬಹುದಾದ ನಿಧಿಯಲ್ಲಿ ಶೇ.100ರಷ್ಟು ಹಣ ಹಿಂಪಡೆತಕ್ಕೆ ಅವಕಾಶ ನೀಡುವ ಪ್ರಸ್ತಾಪವನ್ನು ಮಂಡಳಿ ಅನುಮೋದಿಸಿದೆ. ಇದರಿಂದ 7 ಕೋಟಿ ಸದಸ್ಯರಿಗೆ ನೆರವಾಗಲಿದೆ.

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌ಒ) ಮಂಡಳಿ ನಿಧಿಯಲ್ಲಿ ಹಿಂಪಡೆಯಬಹುದಾದ ನಿಧಿಯಲ್ಲಿ ಶೇ.100ರಷ್ಟು ಹಣ ಹಿಂಪಡೆತಕ್ಕೆ ಅವಕಾಶ ನೀಡುವ ಪ್ರಸ್ತಾಪವನ್ನು ಮಂಡಳಿ ಅನುಮೋದಿಸಿದೆ. ಇದರಿಂದ 7 ಕೋಟಿ ಸದಸ್ಯರಿಗೆ ನೆರವಾಗಲಿದೆ.

ಹಿಂಪಡೆಯುವಿಕೆಗೆ ಇದ್ದ 13 ಸಂಕೀರ್ಣ ನಿಯಮ ಒಗ್ಗೂಡಿಸಿ, ಅತ್ಯಗತ್ಯ (ಅನಾರೋಗ್ಯ, ಶಿಕ್ಷಾಣ, ವಿವಾಹ), ಗೃಹ ಮತ್ತು ವಿಶೇಷ ಸಂದರ್ಭ ಎಂಬ ಮೂರು ವಿಭಾಗಗಳಾಗಿ ಮಾಡಲಾಗಿದೆ. ಇದರಡಿಯಲ್ಲಿ ಚಂದಾಚಾರರು ತಮ್ಮ ಮತ್ತು ಉದ್ಯೋಗದಾತರ ಪಾಲಿನ ಹಿಂಪಡೆಬಹುದಾದ ನಿಧಿಯಲ್ಲಿ ಶೇ.100ರಷ್ಟು ಹಣವನ್ನು ಸುಲಭವಾಗಿ ಹಿಂಪಡೆಯಬಹುದು.

ಬದಲಾವಣೆ ಅನ್ವಯ, ಶಿಕ್ಷಣಕ್ಕಾಗಿ ಈ ಹಿಂದಿನ ಮಿತಿಗಿಂತ 10 ಪಟ್ಟು ಹೆಚ್ಚು, ವಿವಾಹಕ್ಕೆ ಈ ಹಿಂದಿನ ಮಿತಿಗಿಂತ 5 ಪಟ್ಟು ಹೆಚ್ಚು ಹಣ ಹಿಂಪಡೆಯಬಹುದು. ಭಾಗಶಃ ಹಣ ಹಿಂಪಡೆಯುವಿಕೆಗೆ ಇದ್ದ ಕನಿಷ್ಠ ಸೇವಾ ಮಿತಿಯನ್ನು ಕೇವಲ 12 ತಿಂಗಳಿಗೆ ಇಳಿಸಲಾಗಿದೆ. ಜೊತೆಗೆ ವಿಶೇಷ ಸಂದರ್ಭ ಕೋಟಾ ಹಿಂಪಡೆಯುವಿಕೆಗೆ ಕಾರಣ ನೀಡಬೇಕೆಂಬ ನಿಯಮ ರದ್ದುಪಡಿಸಲಾಗಿದೆ. ಜೊತೆಗೆ ಅವಧಿ ಪೂರ್ವ ಪೂರ್ಣ ಇಪಿಎಫ್‌ ವಾಪಸ್‌ಗೆ ಇದ್ದ 2 ತಿಂಗಳ ನಿಯಮ 12 ತಿಂಗಳಿಗೆ ಹೆಚ್ಚಿಸಲಾಗಿದೆ.

Read more Articles on