18 ಜನ ನಾಪತ್ತೆ, 66 ಜನರಿಗೆ ಗಾಯ
ದುಬೈ: ಇರಾನ್ ದಾಳಿಗೆ ತುತ್ತಾಗಿ ಸ್ಥಗಿತಗೊಂಡಿದ್ದ ಕತಾರ್‌ನ ನೈಸರ್ಗಿಕ ಅನಿಲ ರಫ್ತು ಘಟಕವೊಂದರ ಪುನಾರಂಭದ ವೇಳೆ ಭೀಕರ ಸ್ಫೋಟ ಸಂಭವಿಸಿ 12 ಭಾರತೀಯರು ಸೇರಿ 13 ಜನರು ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ 66 ಕಾರ್ಮಿಕರು ಗಾಯಗೊಂಡಿದ್ದಾರೆ.ಘಟನೆಯಲ್ಲಿ 18 ಜನರು ಕಾರ್ಮಿಕರು ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ಇದೆ.ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ರಫ್ತುದಾರ ದೇಶಗಳಲ್ಲಿ ಒಂದಾದ ಕತಾರ್‌ನ ರಾಸ್ ಲಫನ್ ಪ್ರದೇಶದಲ್ಲಿರುವ ಬರ್ಜಾನ್ ಘಟಕವನ್ನು ಪುನಾರಂಭಿಸುವ ಸಲುವಾಗಿ ಭಾನುವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದೆ. ಮಾರ್ಚ್‌ನಲ್ಲಿ ಬರ್ಜಾನ್ ಘಟಕದ ಮೇಲೆ ಇರಾನ್ ನಡೆಸಿದ್ದ ದಾಳಿಯ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಅಂದಿನಿಂದ ಇಲ್ಲಿ ಗ್ಯಾಸ್ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು. ಇದೀಗ ಅಮೆರಿಕದ ಜತೆ ಇರಾನ್ ಶಾಂತಿ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಕಾರ್ಯಾಚರಣೆ ಆರಂಭಕ್ಕೆ ಮುಂದಾಗಿತ್ತು.ಕತಾರ್ ಅನಿಲ ಘಟಕ ಸ್ಫೋಟ: 12 ಮಂದಿ ಭಾರತೀಯರ ಸಾವು
ಇರಾನ್ ದಾಳಿಗೆ ತುತ್ತಾಗಿ ಸ್ಥಗಿತಗೊಂಡಿದ್ದ ಕತಾರ್‌ನ ನೈಸರ್ಗಿಕ ಅನಿಲ ರಫ್ತು ಘಟಕವೊಂದರ ಪುನಾರಂಭದ ವೇಳೆ ಭೀಕರ ಸ್ಫೋಟ ಸಂಭವಿಸಿ 12 ಭಾರತೀಯರು ಸೇರಿ 13 ಜನರು ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ 66 ಕಾರ್ಮಿಕರು ಗಾಯಗೊಂಡಿದ್ದಾರೆ.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.