ಮಹಾರಾಷ್ಟ್ರ, ರಾಜಸ್ಥಾನ ಹೆದ್ದಾರೀಲಿ 2 ಅಪಘಾತ:12 ಸಾವು, 31 ಜನಕ್ಕೆ ಗಾಯ
KannadaprabhaNewsNetwork | Published : Oct 16 2023, 01:46 AM IST / Updated: Oct 16 2023, 11:36 AM IST
ಮಹಾರಾಷ್ಟ್ರ, ರಾಜಸ್ಥಾನ ಹೆದ್ದಾರೀಲಿ 2 ಅಪಘಾತ:12 ಸಾವು, 31 ಜನಕ್ಕೆ ಗಾಯ
ಸಾರಾಂಶ
ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಭಾನುವಾರ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ 19 ಜನರು ಸಾವನ್ನಪ್ಪಿ, 31 ಜನರು ಗಾಯಗೊಂಡಿದ್ದಾರೆ.
ಮುಂಬೈ/ಜೈಪುರ: ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಭಾನುವಾರ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ 19 ಜನರು ಸಾವನ್ನಪ್ಪಿ, 31 ಜನರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಭಾನುವಾರ ಮುಂಜಾನೆ ಖಾಸಗಿ ಮಿನಿ ಬಸ್ಸೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 12 ಜನರು ಸಾವನ್ನಪ್ಪಿದ್ದು 23 ಜನರು ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರು. ರಾಜ್ಯ ಸರ್ಕಾರ ತಲಾ 5 ಲಕ್ಷ ರು. ಪರಿಹಾರ ಪ್ರಕಟಿಸಿದೆ. ಇನ್ನು ರಾಜಸ್ಥಾನದ ಡುಂಗರ್‌ಪುರ್‌ದಲ್ಲಿ ಜೀಪೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿದ್ದಾರೆ.