ಸಾರಾಂಶ
ಕೇಂದ್ರ ಬಜೆಟ್‌ನಲ್ಲಿ ವಿದೇಶಾಂಗ ಇಲಾಖೆಗೆ ಬರೋಬ್ಬರಿ 20,516 ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ. ಇದು ಕಳೆದ ಬಾರಿಗಿಂತ 400 ಕೋಟಿ ರು. ಹೆಚ್ಚುವರಿ ಮೊತ್ತವಾಗಿದೆ. ಈ ಮೊತ್ತವು ವಿದೇಶಗಳಿಗೆ ಸಹಾಯ, ವ್ಯೂಹಾತ್ಮಕ ಹೂಡಿಕೆಗಳಿಗೆ ಬಳಕೆ ಮಾಡಲಾಗುತ್ತದೆ.
ನವದೆಹಲಿ : ಕೇಂದ್ರ ಬಜೆಟ್‌ನಲ್ಲಿ ವಿದೇಶಾಂಗ ಇಲಾಖೆಗೆ ಬರೋಬ್ಬರಿ 20,516 ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ. ಇದು ಕಳೆದ ಬಾರಿಗಿಂತ 400 ಕೋಟಿ ರು. ಹೆಚ್ಚುವರಿ ಮೊತ್ತವಾಗಿದೆ. ಈ ಮೊತ್ತವು ವಿದೇಶಗಳಿಗೆ ಸಹಾಯ, ವ್ಯೂಹಾತ್ಮಕ ಹೂಡಿಕೆಗಳಿಗೆ ಬಳಕೆ ಮಾಡಲಾಗುತ್ತದೆ.
ಬಾಂಗ್ಲಾದೇಶದ ಮುಹಮ್ಮದ್ ಯೂನಸ್ ಸರ್ಕಾರ ಅಧಿಕಾರ ವಹಿಸಿಕೊಂಡು ಹಿಂದೂ ವಿರೋಧಿ ನಡೆಗಳನ್ನು ಅನುಸರಿಸುತ್ತಿರುವ ಮಧ್ಯೆಯೇ ಭಾರತ ಸರ್ಕಾರ ಬಜೆಟ್‌ನಲ್ಲಿ ಬಾಂಗ್ಲಾದೇಶಕ್ಕೆ 120 ಕೋಟಿ ರು. ಅನುದಾನ ಘೋಷಿಸಿದೆ. ಹಸೀನಾ ಸರ್ಕಾರ ಇದ್ದಾಗಲೂ ಸಹ 120 ಕೋಟಿ ರು. ನೀಡಿತ್ತು. ಸದಾ ಕಾಲ ಭಾರತ ವಿರೋಧಿ, ಚೀನಾ ಪರ ಕೆಲಸ ಮಾಡುವ ಮಾಲ್ಡೀವ್ಸ್‌ಗೂ 600 ಕೋಟಿ ರು. ಅನುದಾನ ಘೋಷಿಸಲಾಗಿದೆ. ಈ ಮಧ್ಯೆ ಭಾರತದ ಮಿತ್ರ ರಾಷ್ಟ್ರ ಭೂತಾನ್‌ಗೆ ಅತಿ ಹೆಚ್ಚು ಅನುದಾನ 2150 ಕೋಟಿ ರು. ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ತಾಲಿಬಾನ್ ಆಡಳಿತ ಹೊಂದಿರುವ ಅಫ್ಘಾನಿಸ್ತಾನಕ್ಕೆ ಅನುದಾನವನ್ನು 100 ಕೋಟಿ ರು.ಗೆ ಏರಿಸಲಾಗಿದೆ. ಹಿಂಸಾಪೀಡಿತ ಮ್ಯಾನ್ಮಾರ್‌ಗೆ 350 ಕೋಟಿ ರು. ಶ್ರೀಲಂಕಾಗೆ 700 ಕೋಟಿ ರು., ಆಫ್ರಿಕಾ ರಾಷ್ಟ್ರಗಳಿಗೆ 225 ಕೋಟಿ ರು., ದಕ್ಷಿಣ ಅಮೆರಿಕದ ದೇಶಗಳಿಗೆ 60 ಕೋಟಿ ರು. ಮೀಸಲಿರಿಸಲಾಗಿದೆ. ಮಿಕ್ಕಂತೆ ಇರಾನ್‌ನ ಚಾಬಹಾರ್ ಬಂದರಿಗೆ 100 ಕೋಟಿ ರು., ವಿಪತ್ತು ಪರಿಹಾರ ನಿಧಿಗೆ 64 ಕೋಟಿ ರು. ನಿಗದಿಪಡಿಸಲಾಗಿದೆ. ಇನ್ನು ವಿದೇಶಗಳಲ್ಲಿ ಭಾರತದ ಸಂಸ್ಕೃತಿಯನ್ನು ಪಸರಿಸುವ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಗೆ 351 ಕೋಟಿ ರು. ಅನುದಾನ ಘೋಷಿಸಲಾಗಿದೆ.
ದೇಶ ಅನುದಾನ (ಟ್ಯಾಬ್ ಇದೆ)
ಭುತಾನ್ ₹2,150 ಕೋಟಿ
ನೇಪಾಳ ₹700 ಕೋಟಿ
ಮಾಲ್ಡೀವ್ಸ್ ₹600 ಕೋಟಿ
ಮ್ಯಾನ್ಮಾರ್ ₹350 ಕೋಟಿ
ಶ್ರೀಲಂಕಾ ₹300 ಕೋಟಿ
ಬಾಂಗ್ಲಾದೇಶ ₹120 ಕೋಟಿ
ಅಫ್ಘಾನಿಸ್ತಾನ ₹100 ಕೋಟಿ
ಆಫ್ರಿಕಾ ದೇಶಗಳು ₹225 ಕೋಟಿ
ದಕ್ಷಿಣ ಅಮೆರಿಕ ₹60 ಕೋಟಿ