ಈ ಹಿಂದೆ ಕಲಬೆರಕೆ ತುಪ್ಪದಲ್ಲಿ ಲಡ್ಡು ತಯಾರಿಸಲಾಗಿತ್ತು ಎಂಬ ವಿವಾದದ ನಡುವೆಯೂ ಇಲ್ಲಿನ ವೆಂಕಟೇಶ್ವರ ದೇಗುಲದ ಪವಿತ್ರ ಲಡ್ಡು ಪ್ರಸಾದವು ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ. 2025ರಲ್ಲಿ 13.52 ಕೋಟಿ ಲಡ್ಡು ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ ಶೇ.10ರಷ್ಟು ಅಧಿಕವಾಗಿದೆ. ಇದರ ಜೊತೆಗೆ 2025ರ ಡಿ.27ರಂದು ಒಂದೇ ದಿನ 5.13 ಲಕ್ಷ ಲಡ್ಡು ಮಾರಾಟವಾಗಿದ್ದು, ಇದು ಸಹ ದಶಕದಲ್ಲಿಯೇ ಏಕದಿನದ ಅತ್ಯಧಿಕ ಮಾರಾಟದ ದಾಖಲೆಗೆ ಸೇರಿದೆ ಎಂದು ಟಿಟಿಡಿ ತಿಳಿಸಿದೆ.
- ಕಳೆದ ವರ್ಷಕ್ಕಿಂತ 1.37 ಕೋಟಿ ಹೆಚ್ಚು ಲಡ್ಡು ಮಾರಾಟ
- ಡಿ.27ಕ್ಕೆ 5.13 ಲಕ್ಷ ಲಡ್ಡು ಮಾರಾಟ: ದಶಕದ ದಾಖಲೆ- ಕಲಬೆರಕೆ ತುಪ್ಪದ ಲಡ್ಡು ವಿವಾದಕ್ಕೂ ಜಗ್ಗದ ಭಕ್ತರು
ತಿರುಮಲ: ಈ ಹಿಂದೆ ಕಲಬೆರಕೆ ತುಪ್ಪದಲ್ಲಿ ಲಡ್ಡು ತಯಾರಿಸಲಾಗಿತ್ತು ಎಂಬ ವಿವಾದದ ನಡುವೆಯೂ ಇಲ್ಲಿನ ವೆಂಕಟೇಶ್ವರ ದೇಗುಲದ ಪವಿತ್ರ ಲಡ್ಡು ಪ್ರಸಾದವು ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ. 2025ರಲ್ಲಿ 13.52 ಕೋಟಿ ಲಡ್ಡು ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ ಶೇ.10ರಷ್ಟು ಅಧಿಕವಾಗಿದೆ. ಇದರ ಜೊತೆಗೆ 2025ರ ಡಿ.27ರಂದು ಒಂದೇ ದಿನ 5.13 ಲಕ್ಷ ಲಡ್ಡು ಮಾರಾಟವಾಗಿದ್ದು, ಇದು ಸಹ ದಶಕದಲ್ಲಿಯೇ ಏಕದಿನದ ಅತ್ಯಧಿಕ ಮಾರಾಟದ ದಾಖಲೆಗೆ ಸೇರಿದೆ ಎಂದು ಟಿಟಿಡಿ ತಿಳಿಸಿದೆ.ವೆಂಕಟೇಶ್ವರ ದೇಗುಲದ ಅಧಿಕೃತ ಮಂಡಳಿಯಾಗಿರುವ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಲಡ್ಡು ಮಾರಾಟದ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಅದರಲ್ಲಿ 2024ರಲ್ಲಿ 12.15 ಕೋಟಿ ಲಡ್ಡುಗಳು ಮಾರಾಟವಾಗಿದ್ದವು. 2025ರಲ್ಲಿ ಶೇ.10ರಷ್ಟು ಅಂದರೆ 1.37 ಕೋಟಿಯಷ್ಟು ಹೆಚ್ಚಾಗಿ, 2025ರಲ್ಲಿ ದಾಖಲೆಯ 13.52 ಕೋಟಿಗೆ ಏರಿಕೆಯಾಗಿದೆ.
ಲಡ್ಡು ಮಾರಾಟದಿಂದ 2025ರಲ್ಲಿ 676 ಕೋಟಿ ರು. ಆದಾಯ ಬಂದಿರಬಹುದು ಎಂದು ಅಂದಾಜಿಸಲಾಗಿದೆ.ವಿವಾದದ ಮಧ್ಯೆ ಏರಿಕೆ:
2024ರಲ್ಲಿ ಆಂಧ್ರ ಪ್ರದೇಶದ ಅಧಿಕಾರ ವಹಿಸಿಕೊಂಡ ಸಿಎಂ ಚಂದ್ರಬಾಬು ನಾಯ್ಡು ಅವರು ಹಿಂದಿನ ಜಗನ್‌ಮೋಹನ್ ಯಾದವ್ ಅವರ ಆಡಳಿತವು ಲಡ್ಡು ತಯಾರಿಕೆಯಲ್ಲಿ ಹಂದಿ, ಹಸು ಕಬ್ಬು ಮತ್ತು ಮೀನಿನ ಎಣ್ಣೆಯನ್ನು ಅಂಶವಿರುವ ಕಲಬೆರಿಕೆ ತುಪ್ಪವನ್ನು ಬಳಸಿತ್ತು ಎಂಬ ಗಂಭೀರ ಆರೋಪವನ್ನು ಮಾಡಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯೂ ಆರಂಭವಾಗಿತ್ತು. ಇದೆಲ್ಲದರ ನಡುವೆಯೇ ಲಡ್ಡು ಮಾರಾಟ ಸಂಖ್ಯೆ ಏರಿಕೆ ಕಂಡಿರುವುದು ಗಮನಾರ್ಹ.