ತೆಲಂಗಾಣ: 15 ವೈದ್ಯರು ವಿಧಾನಸಭೆಗೆ, ಪ್ರತಿ 10ರಲ್ಲಿ ಒಬ್ಬ ಶಾಸಕ ವೈದ್ಯ!

| Published : Dec 06 2023, 01:15 AM IST

ತೆಲಂಗಾಣ: 15 ವೈದ್ಯರು ವಿಧಾನಸಭೆಗೆ, ಪ್ರತಿ 10ರಲ್ಲಿ ಒಬ್ಬ ಶಾಸಕ ವೈದ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 15 ಜನ ವೈದ್ಯರು ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ರಾಜ್ಯದ ವಿಧಾನಸಭೆಯಲ್ಲಿ ಶೇ.12ರಷ್ಟು ಜನ ವೈದ್ಯರೇ ಆಗಿದ್ದು, ಪ್ರತಿ 10 ಶಾಸಕರಲ್ಲಿ ಒಬ್ಬರು ವೈದ್ಯರಾಗಿದ್ದಾರೆ.

ಕಾಂಗ್ರೆಸ್‌ನಿಂದ 11, ಬಿಜೆಪಿಯ 1, ಬಿಆರ್‌ಎಸ್‌ನ 3 ವೈದ್ಯರು

ಹೈದಾರಾಬಾದ್‌: ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 15 ಜನ ವೈದ್ಯರು ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ರಾಜ್ಯದ ವಿಧಾನಸಭೆಯಲ್ಲಿ ಶೇ.12ರಷ್ಟು ಜನ ವೈದ್ಯರೇ ಆಗಿದ್ದು, ಪ್ರತಿ 10 ಶಾಸಕರಲ್ಲಿ ಒಬ್ಬರು ವೈದ್ಯರಾಗಿದ್ದಾರೆ.ಗೊಟ್ಟು 15 ಜನ ವೈದ್ಯರಲ್ಲಿ 11 ಮಂದಿ ಕಾಂಗ್ರೆಸ್‌, 1 ಬಿಜೆಪಿ ಮತ್ತು 3 ಬಿಆರ್‌ಎಸ್‌ ಅಭ್ಯರ್ಥಿಗಳಾಗಿದ್ದಾರೆ.

ಅವರೆಂದರೆ ಕಾಂಗ್ರೆಸ್‌ನಿಂದ ಡಾ. ಭೂಪತಿ ರೆಡ್ಡಿ, ನಿಜಾಮಾಬಾದ್‌ (ಕಾಂಗ್ರೆಸ್‌), ಡಾ. ರಾಮ ಚಂದ್ರ ನಾಯ್ಕ್‌, ಡೋರ್ನಕಲ್‌, ಡಾ. ವಂಶಿ ಕೃಷ್ಣ ಅಚಂಪೇಟೆ, ಡಾ. ಮುರುಳಿ ನಾಯ್ಕ್‌, ಮೆಹಬೂಬಾಬಾದ್‌, ಡಾ. ಕೆ ಸತ್ಯನಾರಾಯಣ, ಮನಕೊಂಡೂರು, ಡಾ. ಪರ್ಣಿಕಾ ರೆಡ್ಡಿ, ನಾರಾಯಣಪೇಟೆ, ಡಾ. ಸಂಜೀವ್‌ ರೆಡ್ಡಿ ನಾರಾಯಣಖೇಡ್‌, ಡಾ. ರಾಜೇಶ್‌ ರೆಡ್ಡಿ, ನಾಗರ್‌ಕರ್‌ನೂಲ್‌, ಡಾ. ಸಂಜಯ್‌ ಕೊರುಟ್ಲ, ಡಾ. ರಾಗಮಯಿ ಸತ್ತುಪಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸದ್ಯ ಇವರಲ್ಲಿ ಯಾರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಲಿದ್ದಾರೆ ಎಂಬುದೇ ಕುತೂಹಲಕಾರಿಯಾಗಿದೆ. ಬಿಜೆಪಿಯ ಡಾ. ಹರೀಶ್‌ ಬಾಬು, ಸಿರ್ಪುರ ಕ್ಷೇತ್ರದಿಂದ ಗೆದ್ದಿದ್ದಾರೆ.