ನವದೆಹಲಿ: ಹಾವು ಕಡಿತದಿಂದ ಸಾವನ್ನಪ್ಪುವವರ ಸಂಖ್ಯೆಗಳಲ್ಲಿ ಕರ್ನಾಟಕ ಸತತ 2ನೇ ವರ್ಷವೂ ಮೊದಲ ಸ್ಥಾನ ಪಡೆದುಕೊಂಡಿದೆ. 2025ರಲ್ಲಿ 160 ಜನ ಹಾಗೂ 2024ರಲ್ಲಿ 101 ಮಂದಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ಈ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದೆ.

ಕರ್ನಾಟಕವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳಲ್ಲಿ ಸಾವಿನ ಸಂಖ್ಯೆ 100 ರ ಗಡಿ ದಾಟಿಲ್ಲ. ಉಳಿದಂತೆ ಕಳೆದ ವರ್ಷ 27,471 ಹಾವು ಕಡಿತ ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 16,805 ಮಂದಿಗೆ ಹಾವು ಕಡಿದಿದ್ದು 2ನೇ ಸ್ಥಾನದಲ್ಲಿದೆ.

2024ರಲ್ಲಿಯೂ ಪಶ್ಚಿಮ ಬಂಗಾಳ (20,888), ಕರ್ನಾಟಕ (13,235) ಹಾವು ಕಡಿತ ಪ್ರಕರಣಗಳೊಂದಿಗೆ ಅಗ್ರ 2 ಸ್ಥಾನದಲ್ಲಿದ್ದವು.


- ಹಾವಿನ ಕಡಿತದಿಂದ ಸಾವಿನಲ್ಲಿ ಕರ್ನಾಟಕ ನಂ.1

- 2024ರಲ್ಲಿ 101, 2025ರಲ್ಲಿ 160 ಜನ ದುರ್ಮರಣ

- ಸಾವಲ್ಲಿ ಕರ್ನಾಟಕ ಮಾತ್ರ ಶತಕ, ಬೇರೆಲ್ಲೂ ಶತಕವಿಲ್ಲ

- ಆದರೆ ಹಾವು ಕಡಿತದಲ್ಲಿ ಪ.ಬಂಗಾಳಕ್ಕೆ 1ನೇ ಸ್ಥಾನ

- ಬಂಗಾಳದಲ್ಲಿ 27,471 ಹಾವು ಕಡಿತ ಪ್ರಕರಣ ದಾಖಲು

- ಕರ್ನಾಟಕದಲ್ಲಿ 16,805 ಮಂದಿಗೆ ಹಾವು ಕಡಿದು ನಂ.2