ದೇಶದ 2ನೇ ಅತಿ ಸುದೀರ್ಘ ಚುನಾವಣೆ ಇದು

| Published : Mar 17 2024, 01:45 AM IST / Updated: Mar 17 2024, 08:37 AM IST

ಸಾರಾಂಶ

18ನೇ ಲೋಕಸಭಾ ಚುನಾವಣೆ 82 ದಿನಗಳ ಕಾಲ ನಡೆಯುವ ಪ್ರಕ್ರಿಯೆಯಾಗಿದ್ದು, ಚುನಾವಣಾ ಇತಿಹಾಸದಲ್ಲಿ ಎರಡನೇ ದೀರ್ಘವಾದ ಚುನಾವಣಾ ಪ್ರಕ್ರಿಯೆ ಎನಿಸಿಕೊಳ್ಳಲಿದೆ.

ನವದೆಹಲಿ: ಪ್ರಸ್ತುತ ಪ್ರಕಟವಾಗಿರುವ 18ನೇ ಲೋಕಸಭಾ ಚುನಾವಣೆ ಭಾರತೀಯ ಚುನಾವಣಾ ಇತಿಹಾಸದಲ್ಲಿ ಎರಡನೇ ಅತೀ ಸುದೀರ್ಘ ಚುನಾವಣೆಯಾಗಿ ದಾಖಲಾಗಲಿದೆ.

ಈ ಬಾರಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಒಟ್ಟು 82 ದಿನಗಳ ಕಾಲ ನಡೆಯಲಿದೆ.

ಇದಕ್ಕೂ ಮೊದಲು ಪ್ರಥಮ ಸಾರ್ವತ್ರಿಕ ಚುನಾವಣೆ ಬರೋಬ್ಬರಿ 4 ತಿಂಗಳ ಕಾಲ ನಡೆದು ಅತಿ ದೀರ್ಘ ಕಾಲ ನಡೆದ ಚುನಾವಣೆ ಎನಿಸಿತ್ತು.

1980ರಲ್ಲಿ ನಡೆದ ಚುನಾವಣೆ ಅತಿ ಚಿಕ್ಕ ಅವಧಿಯದ್ದಾಗಿದ್ದು, ಆಗ ಕೇವಲ 4 ದಿನಗಳಲ್ಲಿ ಸಮಸ್ತ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿತ್ತು.