ಮಹಾ: ₹100 ಕೋಟಿ ಮೌಲ್ಯದ ಮೆಫೆಡ್ರೋನ್ ವಶ: ಸೋದರರ ಸೆರೆ
KannadaprabhaNewsNetwork | Published : Oct 18 2023, 01:00 AM IST / Updated: Oct 18 2023, 01:01 AM IST
ಮಹಾ: ₹100 ಕೋಟಿ ಮೌಲ್ಯದ ಮೆಫೆಡ್ರೋನ್ ವಶ: ಸೋದರರ ಸೆರೆ
ಸಾರಾಂಶ
ಮಹಾರಾಷ್ಟ್ರದಲ್ಲಿ ಪೊಲೀಸರು ಬೃಹತ್ ಮಾದಕ ವಸ್ತುಗಳ ಜಾಲವನ್ನು ಭೇದಿಸಿದ್ದು, 100 ಕೋಟಿ ರು. ಮೌಲ್ಯದ ಮೆಫೆಡ್ರೋನ್ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ಇಬ್ಬರು ಸೋದರರನ್ನು ಬಂಧಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಪೊಲೀಸರು ಬೃಹತ್ ಮಾದಕ ವಸ್ತುಗಳ ಜಾಲವನ್ನು ಭೇದಿಸಿದ್ದು, 100 ಕೋಟಿ ರು. ಮೌಲ್ಯದ ಮೆಫೆಡ್ರೋನ್ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ಇಬ್ಬರು ಸೋದರರನ್ನು ಬಂಧಿಸಿದ್ದಾರೆ. ಸೊಲ್ಲಾಪುರ ಜಿಲ್ಲೆಯ ಚಿಂಚೋಳಿ ಸಮೀಪ ನಿಷೇಧಿತ ಮೆಫೆಡ್ರೋನ್‌ನನ್ನು ತಯಾರಿಸುತ್ತಿದ್ದ ಘಟಕಕ್ಕೆ ಇಲ್ಲಿನ ಪೊಲೀಸರು ದಾಳಲಿ ನಡೆಸಿ 100 ಕೋಟಿ ರು. ಮೌಲ್ಯದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಖಾನೆಯನ್ನು ನಡೆಸುತ್ತಿದ್ದ ರಾಹುಲ್ ಕಿಸಾನ್ ಗವಾಲಿ ಹಾಗೂ ಅತುಲ್ ಎಂಬ ಸೋದರರನ್ನು ಮುಂಬೈ ಸಮೀಪದಲ್ಲಿ ಬಂಧಿಸಿದ್ದಾರೆ.