ಸಾರಾಂಶ
ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನ ತ್ಯಜಿಸಿ ಭಾರತಕ್ಕೆ ಪರಾರಿಯಾದ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್‌ನ 29 ನಾಯಕರ ಶವಗಳು ಪತ್ತೆಯಾಗಿವೆ. ಇದರೊಂದಿಗೆ ಬಾಂಗ್ಲಾ ದಂಗೆಗೆ ಬಲಿಯಾದವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ.
ಢಾಕಾ: ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನ ತ್ಯಜಿಸಿ ಭಾರತಕ್ಕೆ ಪರಾರಿಯಾದ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್‌ನ 29 ನಾಯಕರ ಶವಗಳು ಪತ್ತೆಯಾಗಿವೆ. ಇದರೊಂದಿಗೆ ಬಾಂಗ್ಲಾ ದಂಗೆಗೆ ಬಲಿಯಾದವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ.
ಅವಾಮಿ ಲೀಗ್‌ನ ಮುಖಂಡರ ಮನೆ ಹಾಗೂ ಉದ್ದಿಮೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗುತ್ತಿದೆ. ಇಂತಹ ಒಂದು ಘಟನೆ ಶಟ್ಖೀರಾದಲ್ಲಿ ನಡೆದಿದ್ದು, 10 ಶವಗಳು ಸಿಕ್ಕಿವೆ. ಮತ್ತೊಂದೆಡೆ, ಕುಮಿಲ್ಲಾದಲ್ಲಿ ಮಾಜಿ ಪಾಲಿಕೆ ಮಾಜಿ ಸದಸ್ಯ ಮೊಹಮ್ಮದ್ ಶಾ ಆಲಂ ಮನೆಗೆ ಬೆಂಕಿ ಹಚ್ಚಲಾಗಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ.ಮತ್ತೊಂದೆಡೆ ಸಂಸದ ಶಫೀಖುಲ್ ಇಸ್ಲಾಂ ಶಿಮುಲ್ ಅವರ ಮನೆಗೆ ಹಿಂಸಾಕೋರರು ಬೆಂಕಿ ಹಚ್ಚಿದ್ದು, ನಾಲ್ವರು ದಹಿಸಿ ಹೋಗಿದ್ದಾರೆ. ಇದೇ ವೇಳೆ, ಅವಾಮಿ ಲೀಗ್‌ನ ಯುವ ವಿಭಾಗ ಜುಬೋ ಲೀಗ್‌ನ ಇಬ್ಬರು ನಾಯಕರ ಶವಗಳು ಸಿಕ್ಕಿವೆ. ಆ ಪೈಕಿ ಒಬ್ಬರನ್ನು ಸೇತುವೆಗೆ ನೇತು ಹಾಕಲಾಗಿದೆ. ಬೋಗ್ರಾದಲ್ಲಿ ಮತ್ತಿಬ್ಬರನ್ನು ಕೊಲ್ಲಲಾಗಿದೆ.