ಪಂಜಾಬ್‌ ಮತ್ತು ಉತ್ತರ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆ : 3 ಶಂಕಿತ ಖಲಿಸ್ತಾನಿ ಉಗ್ರರ ಹತ್ಯೆ

| Published : Dec 24 2024, 12:47 AM IST / Updated: Dec 24 2024, 03:42 AM IST

ಸಾರಾಂಶ

ಪಂಜಾಬ್‌ನ ಗುರುದಾಸ್‌ಪುರ ಪೊಲೀಸ್‌ ಠಾಣೆ ಮೇಲೆ ಇತ್ತೀಚೆಗೆ ನಡೆದ ಗ್ರೆನೇಡ್‌ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ಖಲಿಸ್ತಾನಿ ಉಗ್ರರನ್ನು ಸೋಮವಾರ ಪಂಜಾಬ್‌ ಮತ್ತು ಉತ್ತರ ಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ.

ಪೀಲಿಭೀತ್‌/ಚಂಡೀಘಡ: ಪಂಜಾಬ್‌ನ ಗುರುದಾಸ್‌ಪುರ ಪೊಲೀಸ್‌ ಠಾಣೆ ಮೇಲೆ ಇತ್ತೀಚೆಗೆ ನಡೆದ ಗ್ರೆನೇಡ್‌ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ಖಲಿಸ್ತಾನಿ ಉಗ್ರರನ್ನು ಸೋಮವಾರ ಪಂಜಾಬ್‌ ಮತ್ತು ಉತ್ತರ ಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ.

 ಮೃತರನ್ನು ವಿರೇಂದರ್‌ ಸಿಂಗ್‌ ಅಲಿಯಾಸ್ ರವಿ, ಗುರುವಿಂದರ್‌ ಸಿಂಗ್‌ ಮತ್ತು ಜಶ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಪ್ರತಾಪ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಇವರೆಲ್ಲ ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌ (ಕೆಝಢ್‌ಎಫ್‌) ಉಗ್ರ ಸಂಘಟನೆ ಸದಸ್ಯರು. ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲದೊಂದಿಗೆ ಈ ಗುಂಪು ಪಂಜಾಬ್‌ನಲ್ಲಿ ಉಗ್ರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ.