ಸಾರಾಂಶ
ಸಂದೇಶ್‌ಖಾಲಿ ದೌರ್ಜನ್ಯ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಶಾಜಹಾನ್ ಸೋದರ ಅಲೋಂಗಿರ್ ಸೇರಿ ಮೂವರನ್ನು ಸಿಬಿಐ ಬಂಧಿಸಿದೆ.
ನವದೆಹಲಿ: ಸಂದೇಶ್‌ಖಾಲಿಯಲ್ಲಿ ತನಿಖೆ ನಡೆಸಲು ಬಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಾಜಹಾನ್ ಶೇಖ್ ಸೋದರ ಅಲೋಂಗಿರ್ ಸೇರಿ ಮೂವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಶಾಜಹಾನ್ ಸೋದರನ ಜೊತೆಗೆ ಟಿಎಂಸಿ ಕಾರ್ಯಕರ್ತ ಮಫುಜಾರ್ ಮೊಲ್ಲ ಮತ್ತು ಸ್ಥಳೀಯನಾದ ಸಿರಾಜುಲ್ ಮೊಲ್ಲ ಎಂಬುವವರನ್ನು ಬಂಧಿಸಿದ್ದು, ಸೋಮವಾರ ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ. ಇದರೊಂದಿಗೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇದಕ್ಕೂ ಮೊದಲು ಫೆ.29ರಂದು ಪ್ರಕರಣದ ಪ್ರಮುಖ ಆರೋಪಿ ಶಾಜಹಾನ್‌ನನ್ನು ಬಂಧಿಸಲಾಗಿತ್ತು.