ಸಾರಾಂಶ
ಮಣಿಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮೇಲೆ 300 ಜನರು ದಾಳಿ ಮಾಡಿದ್ದಾರೆ.
ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸೆ ಮರುಕಳಿಸಿದ್ದು, ಪೊಲೀಸ್ ಪೇದೆಯೊಬ್ಬನ ಅಮಾನತು ಖಂಡಿಸಿ ಗುರುವಾರ ರಾತ್ರಿ ಉದ್ರಿಕ್ತರ ಗುಂಪೊಂದು ಚುರಾಚಂದ್‌ಪುರ ಎಸ್ಪಿ ಕಚೇರಿ ಮೇಲೆ ದಾಳಿ ಮಾಡಿದೆ.
ವಿಡಿಯೋವೊಂದರಲ್ಲಿ ಈ ಪೇದೆ ಶಸ್ತ್ರಧಾರಿಗಳ ಜತೆ ಕಾಣಿಸಿಕೊಂಡಿದ್ದ.ಹೀಗಾಗಿ ಆತನನ್ನು ಅಮಾನತು ಮಡಲಾಗಿತ್ತು.
ಇದನ್ನು ಖಂಡಿಸಿ 300 ಉದ್ರಿಕ್ತರು ಎಸ್ಪಿ ಕಚೇರಿ ಮೇಲೆ ಕಲ್ಲು ತೂರಿ ದಾಳಿ ಮಾಡಿದ್ದಾರೆ.