ಸಾರಾಂಶ
300 ಅಡಿ ಆಳದ ಕಂದಕಕ್ಕೆ ಉರುಳಿ ಅವಘಡ. ಜಮ್ಮು ಕಾಶ್ಮೀರದ ದೋಡಾದ ಬಳಿ ಬಸ್ಸೊಂದು 300 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 36 ಜನ ಸ್ಥಳದಲ್ಲೇ ಸಾವಿಗೀಡಾಗಿ, 19ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ದೋಡಾ: ಜಮ್ಮು ಕಾಶ್ಮೀರದ ದೋಡಾದ ಬಳಿ ಬಸ್ಸೊಂದು 300 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 36 ಜನ ಸ್ಥಳದಲ್ಲೇ ಸಾವಿಗೀಡಾಗಿ, 19ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ದುರ್ಘಟನೆಗೆ ತುತ್ತಾದ ಬಸ್ ಬಟೋಟ್ ಮತ್ತು ಕಿಶ್ತ್‌ವಾರ್ ರಾಷ್ಟ್ರೀಯ ಹೆದ್ದಾರಿಯ ತೃಂಗಲ್- ಅಸ್ಸಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಜಾರಿ 300 ಅಡಿ ಆಳದ ಕಂದಕ್ಕೆ ಬಿದ್ದಿದೆ. ಈ ದುರ್ಘಟನೆಯಲ್ಲಿ 36 ಮಂದಿ ಸಾವಿಗೀಡಾಗಿದ್ದು, 19 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ದೋಡಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿ ಎತ್ತರದಿಂದ ಬಿದ್ದ ಕಾರಣ ಬಸ್ಸು ಸಂಪೂರ್ಣವಾಗಿ ಜಖಂಗೊಂಡಿದ್ದು, ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರು. ಹಾಗೂ ಗಾಯಾಳುಗಳಿಗೆ 50 ಸಾವಿರ ರು.ಗಳ ಪರಿಹಾರ ಘೋಷಿಸಲಾಗಿದೆ. ಗಣ್ಯರ ಸಂತಾಪ: ಈ ದುರ್ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರಪತಿ ದ್ರೌಪದಿ ಮುರ್ಮು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಡಿಸಿದ್ದಾರೆ.====
ಈ ವರ್ಷ ದೋಡಾದಲ್ಲಿ ಸಂಭವಿಸಿದ ಅಪಘಾತಗಳುಮೇ.24: ಕ್ರೂಸ್ ವಾಹನ ಬಿದ್ದು 7 ಸಾವು
ಜೂ.27: ವಾಹನ ಕಂದಕಕ್ಕೆ ಬಿದ್ದು 5 ಸಾವುಆ.30, 2023: ಕಾರ್ ಕಂದಕಕ್ಕೆ ಉರುಳಿ 8 ಸಾವು
ಸೆ.14, 2018: ಮಿನಿಬಸ್ ಕಂದಕ್ಕೆ ಬಿದ್ದು 17 ಸಾವುಜು.1, 2019: ಬಸ್ ಕಂದಕಕ್ಕೆ ಉರುಳಿ 35 ಸಾವು