ಅಮೆರಿಕವು ನಾಲ್ಕನೆಯ ಹಂತದಲ್ಲಿ ಗಡೀಪಾರು ಪ್ರಕ್ರಿಯೆ ನಡೆಸಿದ್ದು ಮತ್ತೆ 12 ವಲಸಿಗರು ಭಾರತಕ್ಕೆ

| N/A | Published : Feb 24 2025, 12:30 AM IST / Updated: Feb 24 2025, 05:43 AM IST

ಸಾರಾಂಶ

ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ಪ್ರಕ್ರಿಯೆ ಮುಂದುವರೆದಿದೆ. ಭಾನುವಾರ ಅಮೆರಿಕವು ನಾಲ್ಕನೆಯ ಹಂತದಲ್ಲಿ ಗಡೀಪಾರು ಪ್ರಕ್ರಿಯೆ ನಡೆಸಿದ್ದು, ತನ್ನ ದೇಶದಲ್ಲಿ ನೆಲೆಸಿದ್ದ 12 ಅಕ್ರಮ ವಲಸಿಗರನ್ನು ಭಾರತಕ್ಕೆ ಕಳುಹಿಸಿದೆ.

ನವದೆಹಲಿ: ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ಪ್ರಕ್ರಿಯೆ ಮುಂದುವರೆದಿದೆ. ಭಾನುವಾರ ಅಮೆರಿಕವು ನಾಲ್ಕನೆಯ ಹಂತದಲ್ಲಿ ಗಡೀಪಾರು ಪ್ರಕ್ರಿಯೆ ನಡೆಸಿದ್ದು, ತನ್ನ ದೇಶದಲ್ಲಿ ನೆಲೆಸಿದ್ದ 12 ಅಕ್ರಮ ವಲಸಿಗರನ್ನು ಭಾರತಕ್ಕೆ ಕಳುಹಿಸಿದೆ.

ಭಾರತಕ್ಕೆ ಹಿಂದಿರುಗಿದ 12 ಜನರ ಪೈಕಿ ನಾಲ್ವರು ಪಂಜಾಬ್‌ನ ಅಮೃತಸರಕ್ಕೆ ಸೇರಿದವರು. ಪನಾಮ ಮೂಲಕ ಅವರೆಲ್ಲರೂ ಸ್ವದೇಶಕ್ಕೆ ಮರಳಿದ್ದಾರೆ. ಇದರೊಂದಿಗೆ ಎಲ್ಲ 4 ಹಂತಗಳಲ್ಲಿ ಗಡೀಪಾರಿಗೆ ಒಳಗಾದ ಭಾರತೀಯರ ಸಂಖ್ಯೆ 344ಕ್ಕೇರಿದೆ.

ಅಮೆರಿಕವು ಸದ್ಯ 300 ಅಕ್ರಮ ವಲಸಿಗರನ್ನು ಪನಾಮದ ಹೋಟೆಲಿನಲ್ಲಿ ಇರಿಸಿದ್ದು, ಅವರನ್ನು ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ಹಂತಹಂತವಾಗಿ ನಡೆಸುತ್ತಿದೆ.ಶೇ.40ರಷ್ಟು ಜನರು ಸ್ವಯಂಪ್ರೇರಿತವಾಗಿ ಹಿಂದಿರುಗಲು ಹಿಂದೇಟು ಹಾಕುತ್ತಿದ್ದು. ವಿಶ್ವಸಂಸ್ಥೆಯ ಸಂಸ್ಥೆಗಳು ಪರ್ಯಾಯ ಸ್ಥಳಗಳನ್ನು ಹುಡುಕುತ್ತಿವೆ. ಪನಾಮ ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಮೆರಿಕ ಅದರ ವೆಚ್ಚವನ್ನು ಭರಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಕೆಸರು ಸ್ವಚ್ಛ ಮಾಡುತ್ತಿರುವೆ: ಗಡೀಪಾರಿಗೆ ಟ್ರಂಪ್‌ ಸಮರ್ಥನೆ

ವಾಷಿಂಗ್ಟನ್‌: ಅಮೆರಿದ ಅಧಿಕಾರ ವಹಿಸಿಕೊಂಡಾಗಿನಿಂದ ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವಲಸಿಗರ ಗಡೀಪಾರು ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಕೆಸರನ್ನು ಸ್ವಚ್ಛಗೊಳಿಸುತ್ತಿರುವುದಾಗಿ ಹೇಳಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್‌, ಅಮೆರಿಕ ವಂಚಕರು, ಸುಳ್ಳುಕೋರರು, ಕೊಲೆಗಡುಕರನ್ನು ಅವರವರ ದೇಶಕ್ಕೆ ಕಳುಹಿಸಲಾಗುತ್ತಿದೆ. ನಾವು ಕೆಸರುಮಯವಾದ ಪ್ರದೇಶವನ್ನು ಶುಚಿಗೊಳಿಸುತ್ತಿದ್ದೇವೆ ಎಂದು ಹೇಳಿದರು.

ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್‌ ಅವರು ಅಕ್ರಮ ವಲಸಿಗರನ್ನು ಗಡೀಪಾರು ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆಯೇ ಅಧಿಕಾರ ವಹಿಸಿಕೊಂಡಾಗಿನಿಂದ 344 ಭಾರತೀಯರು ಅಮೆರಿಕದಿಂದ ಗಡೀಪಾರಾಗಿದ್ದಾರೆ. ಇದರಲ್ಲಿ ಬಹುಪಾಲು ಪಂಜಾಬ್‌ನವರಾಗಿದ್ದಾರೆ.