ಸಾರಾಂಶ
ರಾಂಚಿ: ಮದುವೆ ಸಮಾರಂಭವೊಂದರಿಂದ ಹಿಂದಿರುಗುತ್ತಿದ್ದ ಬುಡಕಟ್ಟು ಸಮುದಾಯದ ಐವರು ಬಾಲಕಿಯರ ಪೈಕಿ ಮೂವರ ಮೇಲೆ 18 ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ ಭೀಕರ ಘಟನೆ ಜಾರ್ಖಂಡ್‌ನ ಖುಂಟಿ ರಾನಿಯಾ ಪ್ರದೇಶದಲ್ಲಿ ನಡೆದಿದೆ.
ರಾಂಚಿ: ಮದುವೆ ಸಮಾರಂಭವೊಂದರಿಂದ ಹಿಂದಿರುಗುತ್ತಿದ್ದ ಬುಡಕಟ್ಟು ಸಮುದಾಯದ ಐವರು ಬಾಲಕಿಯರ ಪೈಕಿ ಮೂವರ ಮೇಲೆ 18 ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ ಭೀಕರ ಘಟನೆ ಜಾರ್ಖಂಡ್‌ನ ಖುಂಟಿ ರಾನಿಯಾ ಪ್ರದೇಶದಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ಬಾಲಕಿಯರ ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಮದುವೆ ಮುಗಿಸಿ ಹಿಂದಿರುಗುತ್ತಿದ್ದ ಐವರು ಬಾಲಕಿಯರ ಪೈಕಿ, 12-16 ವಯೋಮಾನದ ಮೂವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಕೃತ್ಯವೆಸಗಿದ ಎಲ್ಲರೂ ಅಪ್ರಾಪ್ತರಾಗಿದ್ದು, ಸಂತ್ರಸ್ತ ಬಾಲಕಿಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಲ್ಲ 18 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೃತ್ಯವೆಸಗಿದ ಹುಡುಗರು 16 ವರ್ಷ ಮೇಲ್ಪಟ್ಟು, 18 ವರ್ಷಕ್ಕಿಂತ ಕೆಳಗಿನ ಅಪ್ರಾಪ್ತರಾಗಿದ್ದು, ಅವರನ್ನು ವಯಸ್ಕರಂತೆ ವಿಚಾರಣೆ ನಡೆಸುವುದಾಗಿ ಜಾರ್ಖಂಡ್ ಡಿಜಿಪಿ ಅನುರಾಗ್ ಗುಪ್ತಾ ಮಾಹಿತಿ ನೀಡಿದ್ದಾರೆ.