ಸಾರಾಂಶ
ಅಲಿಗಢ (ಉತ್ತರ ಪ್ರದೇಶ): ಬೀಗಗಳ ತಯಾರಿಕೆಗೆ ಖ್ಯಾತಿ ಪಡೆದಿರುವ ಅಲಿಗಢದ ಬೀಗ ತಯಾರಕರೊಬ್ಬರು ರಾಮ ಮಂದಿರಕ್ಕೆಂದೇ ವಿಶೇಷವಾದ 50 ಕೇಜಿ ತೂಕದ ಬೃಹತ್ ಬೀಗವನ್ನು ಸಿದ್ಧಪಡಿಸಿ ಶನಿವಾರ ರಾಮ ಮಂದಿರಕ್ಕೆ ಅರ್ಪಿಸಿದ್ದಾರೆ.
ಉಮಂಗ್ ಮೋಂಗಾ ಅವರ ಅಲಿಗಢದ ಹ್ಯಾರಿಸ್ಸನ್ ಲಾಕ್ಸ್ ಕಂಪನಿ ತಯಾರಿಸಿದ ಈ ಬೀಗದ ಕೀಲಿಗಳು ಬರೋಬ್ಬರಿ 2 ಕೇಜಿ ತೂಕವಿದ್ದು, ಸತು ಹಾಗೂ ಕಬ್ಬಿಣ ಬಳಸಿ ಇದನ್ನು ತಯಾಸಿದ್ದು, ಇದನ್ನು 6 ಜನ ಕಾರ್ಮಿಕರು ಸತತ 6 ತಿಂಗಳು ಕಾಲ ಸತತ ಪರಿಶ್ರಮ ಇದರಲ್ಲಿದೆ. ಇದನ್ನು ರಾಮ ಮಂದಿರಕ್ಕೆ ಸಮರ್ಪಿಸಿದ್ದಾರೆ.
ಜ.22ಕ್ಕೆ ಅಯೋಧ್ಯೆಯಲ್ಲಿ 10 ಲಕ್ಷ ದೀಪಬೆಳಗಿಸಿ ದೀಪೋತ್ಸವ
ಅಯೋಧ್ಯೆ: ಜ.22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರುವ ಸುದಿನದಂದು ಅಯೋಧ್ಯೆ ನಗರದಲ್ಲಿ 10 ಲಕ್ಷ ದೀಪಗಳನ್ನು ಬೆಳಗಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಈ ಪೈಕಿ 100ಕ್ಕೂ ಹೆಚ್ಚಿನ ದೇಗುಲಗಳು, ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ಮೂಲಕ ಅಯೋಧ್ಯೆ ಪಟ್ಟಣವನ್ನು ದೀಪಗಳಿಂದ ಕಂಗೊಳಿಸುವಂತೆ ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ರಾಮಮಂದಿರಕ್ಕೆ ಬಂಗಾರ ಲೇಪಿತ ಪಾದುಕೆ ಅರ್ಪಣೆ
ಅಹ್ಮದಾಬಾದ್: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗೆ ದೇಶಾದ್ಯಂತ ಭಕ್ತಾದಿಗಳು ಹಲವು ರೀತಿಯ ಉಡುಗೊರೆಗಳನ್ನು ಸಮರ್ಪಿಸುತ್ತಿದ್ದಾರೆ.
ಹಾಗೆಯೇ ಹೈದರಾಬಾದ್ ಮೂಲದ ಚಲ್ಲ ಶ್ರೀನಿವಾಸ್ ಶಾಸ್ತ್ರಿ ಅವರು ಶ್ರೀರಾಮನಿಗೆ ಚಿನ್ನಲೇಪಿತ ಬೆಳ್ಳಿ ಪಾದುಕೆಗಳನ್ನು ದೇಣಿಗೆ ನೀಡಿದ್ದಾರೆ.ಪಾದುಕೆಗಳನ್ನು ಏಳು ಕೆಜಿ ಬೆಳ್ಳಿ ಮತ್ತು ಒಂದು ಕೆಜಿ ಚಿನ್ನದಿಂದ ನಿರ್ಮಿಸಲಾಗಿದೆ.
ಚಲ್ಲ ಶ್ರೀನಿವಾಸ ಶಾಸ್ತ್ರಿ ಅವರು, ತಮಿಳುನಾಡಿನ ರಾಮೇಶ್ವರದಿಂದ ಪ್ರಾರಂಭಿಸಿ ಎರಡು ವರ್ಷಗಳ ಕಾಲ ದೇಶದ ಬಹುತೇಕ ಎಲ್ಲ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿ ಅಯೋಧ್ಯೆಗೆ ತಲುಪಿದ್ದಾರೆ.