ಗುಜರಾತ್‌ ರಾಜ್ಯದಲ್ಲಿ ‘ಚಂಡೀಪುರ’ ಹೆಸರಿನ ವೈರಸ್ ಪತ್ತೆ : 6 ಮಕ್ಕಳು ಬಲಿ, 12 ಜನರಿಗೆ ಈ ಸೋಂಕು

| Published : Jul 17 2024, 12:47 AM IST / Updated: Jul 17 2024, 08:22 AM IST

ಗುಜರಾತ್‌ ರಾಜ್ಯದಲ್ಲಿ ‘ಚಂಡೀಪುರ’ ಹೆಸರಿನ ವೈರಸ್ ಪತ್ತೆ : 6 ಮಕ್ಕಳು ಬಲಿ, 12 ಜನರಿಗೆ ಈ ಸೋಂಕು
Share this Article
  • FB
  • TW
  • Linkdin
  • Email

ಸಾರಾಂಶ

ಗುಜರಾತ್‌ ರಾಜ್ಯದಲ್ಲಿ ‘ಚಂಡೀಪುರ’ ಹೆಸರಿನ ವೈರಸ್ ಪತ್ತೆಯಾಗಿದೆ. ಈ ಸೋಂಕಿಗೆ ಜು.10ರಿಂದ ಈವರೆಗೆ 6 ಮಕ್ಕಳು ಸಾವನ್ನಪ್ಪಿದ್ದು, ಈವರೆಗೆ 12 ಜನರಿಗೆ ಈ ಸೋಂಕು ತಗುಲಿದೆ.

ಅಹಮದಾಬಾದ್‌: ಗುಜರಾತ್‌ ರಾಜ್ಯದಲ್ಲಿ ‘ಚಾಂದಿಪುರ’ ಹೆಸರಿನ ವೈರಸ್ ಪತ್ತೆಯಾಗಿದೆ. ಈ ಸೋಂಕಿಗೆ ಜು.10ರಿಂದ ಈವರೆಗೆ 6 ಮಕ್ಕಳು ಸಾವನ್ನಪ್ಪಿದ್ದು, ಈವರೆಗೆ 12 ಜನರಿಗೆ ಈ ಸೋಂಕು ತಗುಲಿದೆ.

ಮಹಾರಾಷ್ಟ್ರದ ಚಾಂದಿಪುರದಲ್ಲಿ 1965ರಲ್ಲಿ ಇದು ಮೊದಲ ಬಾರಿ ಕಾಣಿಸಿತ್ತು. ಹೀಗಾಗಿ ಇದಕ್ಕೆ ಚಾಂದಿಪುರ ವೈರಸ್‌ ಎನ್ನುತ್ತಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ. ಇದು ಸಾಂಕ್ರಾಮಿಕ ರೋಗ ಅಲ್ಲದಿದ್ದರೂ ಸೊಳ್ಳೆ, ನೊಣಗಳಿಂದ ಈ ಸೋಂಕು ಹರಡುತ್ತದೆ.

ಗುಜರಾತ್‌ನ ಸಬರ್‌ಕಾಂಠಾ ರಾವಳಿ, ಮಹಿಸಾರ, ಖೇಡಾ ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇನ್ನು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಮೂಲದ ತಲಾ ಒಬ್ಬರಲ್ಲಿಯೂ ಈ ಸೋಂಕು ಕಾಣಿಸಿಕೊಂಡಿದ್ದು, ಗುಜರಾತ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸೋಂಕಿನ ಲಕ್ಷಣಗಳೇನು?

ಚಾಂದಿಪುರ ಸೋಂಕು ಸಾಮಾನ್ಯ ಜ್ವರದ ರೋಗ ಲಕ್ಷಣಗಳಂತೆಯೇ ಇರುತ್ತದೆ. ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಸೇರಿದಂತೆ ಕೆಲ ಲಕ್ಷಣಗಳು ಈ ರೋಗ ಬಂದವರಲ್ಲಿ ಕಾಣಿಸಿಕೊಳ್ಳುತ್ತದೆ.