ನಿಯಮ ಉಲ್ಲಂಘನೆ: 600 ವಿದ್ಯಾರ್ಥಿಗಳ ಎಂಬಿಬಿಎಸ್‌ ಪ್ರವೇಶ ರದ್ದು

| Published : Oct 22 2023, 01:01 AM IST

ನಿಯಮ ಉಲ್ಲಂಘನೆ: 600 ವಿದ್ಯಾರ್ಥಿಗಳ ಎಂಬಿಬಿಎಸ್‌ ಪ್ರವೇಶ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ಶಿಕ್ಷಣಕ್ಕೆ ಸೇರುವ ಸಮಯದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ನಡೆದ ಎಂಬಿಬಿಎಸ್ ಪ್ರವೇಶಾತಿಗಳ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಠಿಣ ಕ್ರಮಕ್ಕೆ ನಿರ್ಧರಿಸಿದೆ. ಹೀಗಾಗಿ ಎಂಬಿಬಿಎಸ್‌ ಪ್ರವೇಶ ಪಡೆದ 600 ಹೊಸ ವಿದ್ಯಾರ್ಥಿಗಳ ಅಡ್ಮಿಶನ್‌ ರದ್ದಾಗಲಿದೆ ಎಂದು ಗೊತ್ತಾಗಿದೆ.
ಚೆನ್ನೈ: ವೈದ್ಯಕೀಯ ಶಿಕ್ಷಣಕ್ಕೆ ಸೇರುವ ಸಮಯದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ನಡೆದ ಎಂಬಿಬಿಎಸ್ ಪ್ರವೇಶಾತಿಗಳ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಠಿಣ ಕ್ರಮಕ್ಕೆ ನಿರ್ಧರಿಸಿದೆ. ಹೀಗಾಗಿ ಎಂಬಿಬಿಎಸ್‌ ಪ್ರವೇಶ ಪಡೆದ 600 ಹೊಸ ವಿದ್ಯಾರ್ಥಿಗಳ ಅಡ್ಮಿಶನ್‌ ರದ್ದಾಗಲಿದೆ ಎಂದು ಗೊತ್ತಾಗಿದೆ. ಸುಪ್ರೀಂ ಕೋರ್ಟು ಪ್ರವೇಶಾತಿಗೆ ಸೆ.30ರ ಗಡುವು ವಿಧಿಸಿತ್ತು. ಈ ಗಡುವು ಮೀರಿ ಪ್ರವೇಶಾತಿ ನಡೆದಿದೆ ಹಾಗೂ ಹಲವು ರಾಜ್ಯಗಳಲ್ಲಿ ಕೌನ್ಸೆಲಿಂಗ್‌ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೌನ್ಸೆಲಿಂಗ್‌ ಹೊರತಾಗಿ 3ನೇ ಸಂಸ್ಥೆಯು ಕೌನ್ಸೆಲಿಂಗ್‌ ನಡೆಸಿದೆ ಎಂಬ ದೂರು ಸಲ್ಲಿಕೆಯಾಗಿದ್ದವು. ಹೀಗಾಗಿ ನಿಯಮ ಮೀರಿ ಪ್ರವೇಶ ಪಡೆದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೀಟು ವಂಚಿತರಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.