71 ಔಷಧಗಳು ಕಳಪೆ ಗುಣಮಟ್ಟ : ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹೇಳಿದ ಔಷಧಗಳ್ಯಾವು..?

| Published : Oct 26 2024, 01:05 AM IST / Updated: Oct 26 2024, 06:07 AM IST

ಸಾರಾಂಶ

ಸೆಪ್ಟೆಂಬರ್‌ ತಿಂಗಳಲ್ಲಿ ದೇಶವ್ಯಾಪಿ ನಡೆಸಲಾದ ವಿವಿಧ ಕಂಪನಿಗಳ ವಿವಿಧ ಔಷಧಿಗಳ ಮಾದರಿ ಪರೀಕ್ಷೆ ವೇಳೆ 71 ಔಷಧಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ಕಂಡುಬಂದಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹೇಳಿದೆ.

ನವದೆಹಲಿ: ಸೆಪ್ಟೆಂಬರ್‌ ತಿಂಗಳಲ್ಲಿ ದೇಶವ್ಯಾಪಿ ನಡೆಸಲಾದ ವಿವಿಧ ಕಂಪನಿಗಳ ವಿವಿಧ ಔಷಧಿಗಳ ಮಾದರಿ ಪರೀಕ್ಷೆ ವೇಳೆ 71 ಔಷಧಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ಕಂಡುಬಂದಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹೇಳಿದೆ.

ಹೀಗೆ ಕಳಪೆ ಗುಣಮಟ್ಟ ಹೊಂದಿದ್ದ ಔಷಧಿಗಳ ಪಟ್ಟಿಯಲ್ಲಿ ಕೆಮ್ಮಿನ ಸಿರಪ್‌, ಕಣ್ಣಿನ ಡ್ರಾಪ್‌, ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ3 ಮಾತ್ರೆ, ಸೋಡಿಯಂ ಮಾತ್ರೆಗಳು, ಇಂಜೆಕ್ಷನ್‌ ಸೇರಿವೆ ಎಂದು ಸಂಸ್ಥೆ ಹೇಳಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದ ಆಗಸ್ಟ್‌ ತಿಂಗಳ ತಪಾಸಣಾ ವರದಿಯಲ್ಲೂ 50ಕ್ಕೂ ಹೆಚ್ಚು ಔಷಧಗಳು ಇದೇ ರೀತಿಯ ಕಳಪೆ ಗುಣಮಟ್ಟ ಹೊಂದಿದ್ದಾಗಿ ಹೇಳಲಾಗಿತ್ತು.

ಯಾವ ಕಂಪನಿ ಔಷಧ?:

ಫರೀದಾಬಾದ್‌ನ ಹಿಂದೂಸ್ತಾನ್ ಆ್ಯಂಟಿಬಯೋಟಿಕ್ಸ್‌ ಉತ್ಪಾದಿಸಿದ ಮೆಟ್ರೋನಿಡಾಜೋಲ್‌ ಐಪಿ 400 ಎಂಜಿ ಮಾತ್ರೆ; ರೈನ್‌ಬೋ ಲೈಫ್‌ ಸೈನ್ಸ್‌ನ ಡೊಮ್‌ಪೆರಿಡಾನ್‌ ಸಸ್ಪೆಷನ್ಸ್‌; ಪುಷ್ಕರ್‌ ಫಾರ್ಮಾದ ಆಕ್ಸಿಟೋಸಿನ್‌ ಇಂಜೆಕ್ಷನ್‌ ಐ.ಪಿ. 5ಐಯು/1ಎಂಎಲ್‌ ; ಮಾರ್ಟಿನ್‌ ಆ್ಯಂಡ್‌ ಬ್ರೌನ್‌ ಕಂಪನಿಯ ಕ್ಯಾಲ್ಷಿಯಂ ಗ್ಲುಕೋನೇಟ್‌ ಇಂಜೆಕ್ಷನ್‌; ಲೈಫ್‌ ಮ್ಯಾಕ್ಸ್‌ ಕ್ಯಾನ್ಸರ್‌ ಲ್ಯಾಬ್‌ನ ಕ್ಯಾಲ್ಷಿಯಂ 500 ಎಂಜಿ ಮತ್ತು ವಿಟಮಿನ್‌ ಡಿ3 250 ಐಯು ಮಾತ್ರೆ ಸೇರಿವೆ.