ಸಾರಾಂಶ
ಮಧ್ಯಪ್ರದೇಶದ ಇಂದೋರ್‌ನಲ್ಲಿ 73 ವರ್ಷದ ನಿವೃತ್ತ ಯೋಧರೊಬ್ಬರು ಯೋಗ ಶಿಬಿರದಲ್ಲಿ ನೃತ್ಯ ಮಾಡುತ್ತಲೇ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ 73 ವರ್ಷದ ನಿವೃತ್ತ ಯೋಧರೊಬ್ಬರು ಯೋಗ ಶಿಬಿರದಲ್ಲಿ ನೃತ್ಯ ಮಾಡುತ್ತಲೇ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿನ ಪೂಟಿ ಖೋತಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಬಿರಕ್ಕೆ ತಮ್ಮ ತಂಡದೊಂದಿಗೆ ಬಂದಿದ್ದ ಬಲ್ವೀರ್ ಸಿಂಗ್ ಛಬ್ರಾ ರಾಷ್ಟ್ರ ಧ್ವಜವನ್ನು ಹಿಡಿದು ದೇಶ ಭಕ್ತಿಗೀತೆಗೆ ನೃತ್ಯ ಮಾಡುತ್ತಿದ್ದರು. ಈ ವೇಳೆ ಪ್ರಜ್ಞಾಹೀನರಾಗಿ ಹಠಾತ್ತನೆ ಕುಸಿದು ಬಿದ್ದರು.
ಆರಂಭದಲ್ಲಿ, ಅವರು ಕುಸಿದಿದ್ದನ್ನೂ ನೃತ್ಯದ ಭಾಗವೆಂದೇ ಜನರು ಭಾವಿಸಿದ್ದರು. ಕುಸಿದು ಬಿದ್ದಾಗ ನೆರೆದಿದ್ದ ಇತರರು ಚಪ್ಪಾಳೆ ತಟ್ಟಿದ್ದರು. ಆದರೆ ನಿಮಿಷವಾದರೂ ಬಲ್ವೀರ್ ಸಿಂಗ್ ಎದ್ದೇಳದ ಕಾರಣ ಅನುಮಾನಗೊಂಡು ಪರೀಕ್ಷಿಸಿದಾಗ ಸಾವನ್ನಪ್ಪಿರುವುದು ತಿಳಿದಿದೆ.ಇನ್ನು ಮೃತ ಯೋಧನ ಕುಟುಂಬದವರು ನಿವೃತ್ತ ಯೋಧನ ಅಂಗಾಂಗ ದಾನ ಮಾಡಿದರು.