ಸಾರಾಂಶ
ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ ಮೊದಲ ಕಲಾಪಕ್ಕೆ 75 ವರ್ಷ ತುಂಬಿದೆ. ಸಂವಿಧಾನ ಜಾರಿಗೆ ಬಂದ ಜನವರಿ 26, 1950ರಂದು ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದಿತು. ಜ. 28 1950ರಂದು ಉದ್ಘಾಟನೆಗೊಂಡಿತು. ಈ ಹಿಂದೆ ಸುಪ್ರೀಂ ಕೋರ್ಟ್ ಹಳೆಯ ಸಂಸತ್ ಭವನದಿಂದ ಕಾರ್ಯನಿರ್ವಹಿಸುತ್ತಿತ್ತು. 1958ರಲ್ಲಿ ತಿಲಕ್ ಮಾರ್ಗದಲ್ಲಿರುವ ಈಗಿನ ಕಟ್ಟಡದಲ್ಲಿ ಸ್ಥಳಾಂತರಗೊಂಡಿತು.
ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ ಮೊದಲ ಕಲಾಪಕ್ಕೆ 75 ವರ್ಷ ತುಂಬಿದೆ. ಸಂವಿಧಾನ ಜಾರಿಗೆ ಬಂದ ಜನವರಿ 26, 1950ರಂದು ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದಿತು. ಜ. 28 1950ರಂದು ಉದ್ಘಾಟನೆಗೊಂಡಿತು. ಈ ಹಿಂದೆ ಸುಪ್ರೀಂ ಕೋರ್ಟ್ ಹಳೆಯ ಸಂಸತ್ ಭವನದಿಂದ ಕಾರ್ಯನಿರ್ವಹಿಸುತ್ತಿತ್ತು. 1958ರಲ್ಲಿ ತಿಲಕ್ ಮಾರ್ಗದಲ್ಲಿರುವ ಈಗಿನ ಕಟ್ಟಡದಲ್ಲಿ ಸ್ಥಳಾಂತರಗೊಂಡಿತು. ಸುಪ್ರೀಂ ಕೋರ್ಟ್‌ಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಜೆಐ ಸಂಜೀವ್ ಖನ್ನಾ ಮಾತನಾಡಿ, ‘ ಇದು ನಿಜವಾದ ಜನರ ನ್ಯಾಯಾಲಯ. 140 ಕೋಟಿ ಭಾರತೀಯರ ಆಶೋತ್ತರಗಳನ್ನು ಈಡೇರಿಸಿದೆ. 75 ವರ್ಷಗಳ ಪ್ರಯಾಣದಲ್ಲಿ ಹಲವು ಹೆಗ್ಗುರುತು ತೀರ್ಪುಗಳನ್ನು ನೀಡಿದೆ. ರಾಷ್ಟ್ರದ ಸವಾಲುಗಳಿಗೆ ಕನ್ನಡಿಯಾಗಿದೆ’ ಎಂದರು.