ಮದ್ಯಪಾನ ಸೇವನೆ ಮಾಡಿದ್ದಾರೆಯೇ ಎಂಬುದರ ಪತ್ತೆಗೆ ನಡೆಸಲಾಗುವ ಉಸಿರಾಟ ಪರೀಕ್ಷೆ (ಬ್ರೀತ್‌ಅಲೈಸರ್ ಟೆಸ್ಟ್‌)ಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 995 ಜನ ರೈಲು ಚಾಲಕರು ಫೇಲ್‌ ಆಗಿದ್ದಾರೆ

ಮದ್ಯಪಾನ ಮಾಡಿದ್ದಾರೆಯೇ ಎಂಬುದರ ಪತ್ತೆಗೆ ನಡೆಸುವ ಪರೀಕ್ಷೆ ನವದೆಹಲಿ: ಮದ್ಯಪಾನ ಸೇವನೆ ಮಾಡಿದ್ದಾರೆಯೇ ಎಂಬುದರ ಪತ್ತೆಗೆ ನಡೆಸಲಾಗುವ ಉಸಿರಾಟ ಪರೀಕ್ಷೆ (ಬ್ರೀತ್‌ಅಲೈಸರ್ ಟೆಸ್ಟ್‌)ಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 995 ಜನ ರೈಲು ಚಾಲಕರು ಫೇಲ್‌ ಆಗಿದ್ದಾರೆ. ಅರ್ಥಾಗ್‌ ಈ ಚಾಲಕರು ಕರ್ತವ್ಯದ ವೇಳೆ ಮದ್ಯ ಸೇವಿಸಿದ್ದು ಪತ್ತೆ ಆಗಿದೆ ಎಂದು ಆರ್‌ಟಿಐಗೆ ನೀಡಿದ ಉತ್ತರದಲ್ಲಿ ರೈಲ್ವೇಸ್‌ ಹೇಳಿದೆ.

ಮದ್ಯಪಾನ ಸೇವನೆ ಮಾಡಿದ್ದಾರೆಯೇ ಎಂಬುದರ ಪತ್ತೆಗೆ ನಡೆಸಲಾದ ಉಸಿರಾಟ ಪರೀಕ್ಷೆಯಲ್ಲಿ ವಿಫಲರಾದ ಲೋಕೋ ಪೈಲಟ್‌ಗಳ ಪೈಕಿ ದೆಹಲಿಯಲ್ಲೇ ಅತಿ ಹೆಚ್ಚು, 471 ಜನ ಸಿಕ್ಕಿಬಿದ್ದಿದ್ದು ಈ ಪೈಕಿ 181 ಜನರು ಪ್ರಯಾಣಿಕ ರೈಲು ಚಾಲಕರಾಗಿದ್ದಾರೆ. ಅಲ್ಲದೇ ಒಟ್ಟು 995 ಜನರ ಪೈಕಿ ಮೂರನೇ ಒಂದು ಭಾಗದಷ್ಟು ಲೋಕೋ ಪೈಲಟ್‌ಗಳು ತಮ್ಮ ಕೆಲಸ ಮುಗಿಯುವ ವೇಳೆ ಸಿಕ್ಕಿಬಿದ್ದಿದ್ದಾರೆ. ಅಂದರೆ ಅವರು ಮದ್ಯಪಾನ ಮಾಡಿಯೇ ಚಾಲನೆ ನಡೆಸಿದ್ದಾರೆ ಎಂಬ ಆತಂಕದ ಮಾಹಿತಿ ಹೊರಬಿದ್ದಿದೆ.

ಇನ್ನು ಇದೇ ಅವಧಿಯಲ್ಲಿ ಪ್ಯಾಸೆಂಜರ್ ರೈಲುಗಳ 181 ಲೋಕೋ ಪೈಲಟ್‌ಗಳು ಮತ್ತು 290 ಗೂಡ್ಸ್ ರೈಲುಗಳ ಚಾಲಕರು ಉಸಿರಾಟ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಇನ್ನು ಎಲ್ಲ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.