ಸಾರಾಂಶ
ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿದ್ದ ಯುರೋಪಿಯನ್ ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ಅಲ್ಬೇನಿಯಾದ ಪ್ರಧಾನಿ ಎಡಿ ರಾಮಾ ಮಂಡಿಯೂರಿ ಕೈ ಮುಗಿದು ಭಾರತೀಯರಂತೆ ವಿಭಿನ್ನವಾಗಿ ಸ್ವಾಗತಿಸಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಟಿರನಾ: ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿದ್ದ ಯುರೋಪಿಯನ್ ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ಅಲ್ಬೇನಿಯಾದ ಪ್ರಧಾನಿ ಎಡಿ ರಾಮಾ ಮಂಡಿಯೂರಿ ಕೈ ಮುಗಿದು ಭಾರತೀಯರಂತೆ ವಿಭಿನ್ನವಾಗಿ ಸ್ವಾಗತಿಸಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಲೋನಿ ಶೃಂಗಸಭೆಗೆ ಬರುತ್ತಿದ್ದಂತೆ ಆಲ್ಬೇನಿಯಾ ಪ್ರಧಾನಿ ನೀಲಿ ಬಣ್ಣದ ಕೊಡೆಯನ್ನು ಪಕ್ಕದಲ್ಲಿಟ್ಟು , ರೆಡ್‌ಕಾರ್ಪೆಟ್ ಮೇಲೆ ಮಂಡಿಯೂರಿ ಕುಳಿತಿದ್ದರು. ಮಾತ್ರವಲ್ಲದೇ ಎರಡು ಕೈಗಳನ್ನು ಜೋಡಿಸಿ ಕೈ ಮುಗಿದು ನಮಸ್ಕರಿಸಿ ಸ್ವಾಗತ ಕೋರಿದ್ದಾರೆ. ಇದಕ್ಕೆ ಜಾರ್ಜಿಯಾ ಮೆಲೋನಿ ನಕ್ಕಿದ್ದಾರೆ., ಅನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದು, ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ತರೇವಾರಿ ಕಾಮೆಂಟ್ ಮಾಡಿದ್ದಾರೆ. ಕೆಲ ನೆಟ್ಟಿಗರಂತೂ ಮಸ್ಕ್ ಮತ್ತು ಮೆಲೋನಿ ನಡುವಿನ ಪ್ರೇಮ ವದಂತಿ ಉಲ್ಲೇಖಿಸಿ , ‘ಎಲಾನ್ ಮಸ್ಕ್‌ಗೆ ಅಸೂಯೆ ಹುಟ್ಟಿಸುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ.